alex Certify ಜಿಮ್ ಗೆ ಹೋಗುವ ಗೀಳು ಇರೋರು ಓದಲೇಬೇಕಾದ ಸುದ್ದಿ ಇದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್ ಗೆ ಹೋಗುವ ಗೀಳು ಇರೋರು ಓದಲೇಬೇಕಾದ ಸುದ್ದಿ ಇದು

ಜಿಮ್ ಗೆ ಹೋಗಿ ಸಖತ್ ಬಾಡಿ ಬೆಳೆಸಬೇಕು ಅನ್ನೋದು ಅನೇಕ ಹುಡುಗರ ಕನಸು. ಅದಕ್ಕಾಗಿ ಮೂರು ನಾಲ್ಕು ಗಂಟೆ ಜಿಮ್ ನಲ್ಲಿ ಕಳೆಯುತ್ತಾರೆ. ಈಗ ಸಿಕ್ಸ್ ಪ್ಯಾಕ್ ಫ್ಯಾಷನ್ ಆಗ್ಬಿಟ್ಟಿದೆ. ಆದ್ರೆ ಬಾಡಿ ಬೆಳೆಸುವ ಕನಸುಳ್ಳ ಹುಡುಗರಿಗೊಂದು ಎಚ್ಚರಿಕೆಯ ಸುದ್ದಿ.

ವರ್ಕ್ ಔಟ್ ನಿಂದ ಬಂಜೆತನ ಬರುವ ಸಾಧ್ಯತೆ ಇದೆಯಂತೆ. ಸಂಶೋಧನೆಯೊಂದು ಈ ವಿಷಯವನ್ನು ಬಹಿರಂಗಪಡಿಸಿದೆ. ಅದರ ಪ್ರಕಾರ ಹೆಚ್ಚು ಸಮಯ ವ್ಯಾಯಾಮ ಮಾಡುವುದರಿಂದ ಹಾಗೂ ತಪ್ಪು ರೀತಿಯಲ್ಲಿ ಜಿಮ್ ಮಾಡುವುದರಿಂದ ಬಂಜೆತನ ಬರುವ ಸಾಧ್ಯತೆ ಇದೆ. ವೈದ್ಯರ ಪ್ರಕಾರ ಹೆಚ್ಚು ಹೊತ್ತು ವ್ಯಾಯಾಮ ಮಾಡುವುದರಿಂದ ಹಾಗೂ ಭಾರ ಎತ್ತುವುದರಿಂದ ವೀರ್ಯ ದುರ್ಬಲವಾಗುತ್ತದೆಯಂತೆ.

ಜಿಮ್ ಗೆ ಹೋಗುವ ಶೇಕಡಾ 20 ರಷ್ಟು ಪುರುಷರಲ್ಲಿ ಈ ಸಮಸ್ಯೆ ಕಾಡುತ್ತದೆಯಂತೆ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆಯಂತೆ. ತಪ್ಪಾಗಿ ವ್ಯಾಯಾಮ ಮಾಡುವುದೇ ಇದಕ್ಕೆ ಮುಖ್ಯ ಕಾರಣವಂತೆ. ಹಾಗಾಗಿ ಮೊದಲ ಬಾರಿ ಜಿಮ್ ಗೆ ಹೋಗುವವರು ತರಬೇತುದಾರರಿಂದ ಸರಿಯಾದ ಮಾರ್ಗದರ್ಶನ ಪಡೆಯಬೇಕೆಂದು ವೈದ್ಯರು ಹೇಳುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...