ಹೂಡಿಕೆ ಮಾಡುವುದರ ಜೊತೆಗೆ ಸುರಕ್ಷಿತ ಹೂಡಿಕೆ ಮಾಡುವುದು ಬಹಳ ಮುಖ್ಯ. ಸುರಕ್ಷಿತ ಹೂಡಿಕೆಯಲ್ಲಿ ಅಂಚೆ ಕಚೇರಿ ಮುಂದಿದೆ. ಅಂಚೆ ಕಚೇರಿಯಲ್ಲಿ ಸಾಕಷ್ಟು ಹೂಡಿಕೆ ಯೋಜನೆಗಳಿವೆ. ಅಂಚೆ ಕಚೇರಿ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಹೂಡಿಕೆ ಮಾಡಿದ್ದಾರೆ. ಜೂನ್ 2020 ರಲ್ಲಿ ಮೋದಿ, ಎನ್ಎಸ್ಸಿಯಲ್ಲಿ 8 ಲಕ್ಷದ 43 ಸಾವಿರದ 124 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಜೀವ ವಿಮೆಗಾಗಿ 1 ಲಕ್ಷದ 50 ಸಾವಿರದ 957 ಪ್ರೀಮಿಯಂ ಕಟ್ಟಿದ್ದಾರೆ. ಮೋದಿ ಹೂಡಿಕೆ ಮಾಡಿರುವ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ನೀವೂ ಹೂಡಿಕೆ ಮಾಡಬಹುದು.
ಇದು ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವು ಐದು ವರ್ಷಗಳ ಕನಿಷ್ಠ ಲಾಕ್-ಇನ್ ಅವಧಿಯನ್ನು ಹೊಂದಿದೆ. ನಿಮಗಾಗಿ ಅಥವಾ ಅಪ್ರಾಪ್ತರಿಗಾಗಿ ಇದ್ರಲ್ಲಿ ಹೂಡಿಕೆ ಮಾಡಬಹುದು. ಜಂಟಿಯಾಗಿಯೂ ಇದ್ರಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.
ಈ ಯೋಜನೆಯು ಪ್ರಸ್ತುತ ಶೇಕಡಾ 6.8ರ ದರದಲ್ಲಿ ಬಡ್ಡಿ ಸಿಗುತ್ತದೆ. ಕನಿಷ್ಟ 1,000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಇದಕ್ಕೆ ಗರಿಷ್ಠ ಮಿತಿಯಿಲ್ಲ. ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಿದರೆ, ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಸುರಕ್ಷಿತ ಹೂಡಿಕೆ ಬಯಸುವವರು ಇದ್ರಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆ.