ಸ್ಟ್ರೆಚ್ ಮಾರ್ಕ್. ಅನೇಕ ಮಹಿಳೆಯರನ್ನು ಕಾಡುವ ಸಮಸ್ಯೆಯಿದು. ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಇದು ಕಾಡುತ್ತದೆ. ಇದ್ರಿಂದ ಯಾವುದೇ ತೊಂದರೆಯಿಲ್ಲ. ಆದ್ರೆ ನೋಡಲು ಚೆಂದ ಕಾಣಬೇಕೆನ್ನುವವರಿಗೆ ಇದು ಅಡ್ಡಿಯಾಗುತ್ತದೆ. ಅನೇಕ ಕ್ರೀಂಗಳು ಮಾರುಕಟ್ಟೆಯಲ್ಲಿವೆ. ಆದ್ರೆ ಅದ್ರಿಂದ ಸ್ಟ್ರೆಚ್ ಮಾರ್ಕ್ ಹೋಗುತ್ತೆ ಎನ್ನಲು ಸಾಧ್ಯವಿಲ್ಲ. ಕೆಲ ಮನೆ ಮದ್ದಿನ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ನಿಂಬೆಯಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗುಣವಿರುತ್ತದೆ. ಚರ್ಮದ ಕಲೆಯನ್ನು ತೊಡೆದುಹಾಕುವ ಶಕ್ತಿ ಇದ್ರಲ್ಲಿದೆ. ಹೊಟ್ಟೆ ಭಾಗದಲ್ಲಿ ಸ್ಟ್ರೆಚ್ ಮಾರ್ಕ್ ಇದ್ದಲ್ಲಿ ನಿಂಬೆ ರಸವನ್ನು ಸ್ಟ್ರೆಚ್ ಮಾರ್ಕ್ ಗೆ ಹಾಕಿ. ಸ್ಟ್ರೆಚ್ ಮಾರ್ಕ್ ಜಾಗದಲ್ಲಿ ನಿಂಬೆ ರಸ ಹಚ್ಚಿ 10 ನಿಮಿಷದವರೆಗೆ ರಬ್ ಮಾಡಿ. ನಂತ್ರ ಬೆಚ್ಚಗಿನ ನೀರಿನಲ್ಲಿ ಕ್ಲೀನ್ ಮಾಡಿ.
ಬಾದಾಮಿ ಎಣ್ಣೆ ಚರ್ಮಕ್ಕೆ ಪ್ರಯೋಜನಕಾರಿ. ಇದು ಚರ್ಮವನ್ನು ಆಳವಾಗಿ ಪೋಷಿಸಲು ಸಹಾಯ ಮಾಡುತ್ತದೆ. ಸ್ಟ್ರೆಚ್ ಮಾರ್ಕ್ ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ. ಒಂದರಿಂದ ಎರಡು ಚಮಚ ಬಾದಾಮಿ ಎಣ್ಣೆಯನ್ನು ಸ್ಟ್ರೆಚ್ ಮಾರ್ಕ್ ಗೆ ಹಾಕಿ ರಬ್ ಮಾಡಿ. ಸತತ ಎರಡು ದಿನಗಳ ಕಾಲ ಹೀಗೆ ಮಾಡಿದಲ್ಲಿ ಪರಿಣಾಮ ಕಾಣುತ್ತದೆ.