ಸಾಮಾಜಿಕ ಜಾಲತಾಣ ಬಳಸಿಕೊಂಡು ಹೊಸ ಕ್ರಾಂತಿ ಮಾಡಿಬಿಡುತ್ತೇವೆಂದು ಉತ್ಸಾಹದಲ್ಲಿ ಬರುವ ಅನೇಕರು ಎಡವಿ ಬಿದ್ದ ಅನೇಕ ಉದಾಹರಣೆಗಳಿವೆ. ಇಲ್ಲೊಂದು ಇಂತಹದೇ ಪ್ರಸಂಗ ನಡೆದಿದೆ.
ಪ್ಲಾಂಟ್ ಎ ಟ್ರೀ ಕೋ. ಎಂಬ ಹೆಸರಿನ ಇನ್ ಸ್ಟಾ ಗ್ರಾಮ್ ಅಕೌಂಟ್‌ನಲ್ಲಿ ಹಾಕಿದ ಪೋಸ್ಟ್ ಲಕ್ಷಾಂತರ ಜನರ ಗಮನ ಸೆಳೆಯಿತು. ಏಕೆಂದರೆ, ನೀವು ಸಾಕು ನಾಯಿಯ ಫೋಟೋ ಶೇರ್ ಮಾಡಿ ಪ್ರತಿ ಫೋಟೋಗೊಂದರಂತೆ ನಾವು ಸಸಿ ನೆಡುತ್ತೇವೆಂದು ಕರೆಕೊಟ್ಟಿದ್ದರು.
ಬಸವರಾಜ ಬೊಮ್ಮಾಯಿ ಅಧಿಕಾರ ಹೋಗುತ್ತೆ, ಜನವರಿಗೆ ಹೊಸ ಸಿಎಂ: ಶಿವರಾಜ್ ತಂಗಡಗಿ ಹೊಸ ಬಾಂಬ್
ಇನ್ನು ಕಂಡ ನೆಟ್ಟಿಗರು ಅಚ್ಚರಿಪಟ್ಟು ತಮ್ಮದೂ ಒಂದು ಸಸಿ ಇರಲಿ ಎಂದು ತಮ್ಮ ಪ್ರೀತಿ ಪಾತ್ರ ಸಾಕು ಪ್ರಾಣಿಯ ಫೋಟೋ ಶೇರ್ ಮಾಡಿದರು. ಈ ಸಂಖ್ಯೆ ಕೆಲವೇ ಹೊತ್ತಿನಲ್ಲಿ ನಾಲ್ಕು ಲಕ್ಷ ದಾಟಿತು. ಆದರೆ, ಸಸಿಗಳು ಎಲ್ಲಿ ನೆಡಲಾಗಿದೆ ಎಂಬ ಪ್ರಶ್ನೆಗಳು ಬರಲಾರಂಭಿಸಿದವು. ಪರಿಸ್ಥಿತಿ ಗಂಭೀರತೆ ಅರಿತ ಆ ಸಂಸ್ಥೆಯವರು ಆ ಪೋಸ್ಟನ್ನು 10 ನಿಮಿಷಗಳ ಬಳಿಕ ಡಿಲೀಟ್ ಮಾಡಿಬಿಟ್ಟರು.
ಸಸಿ ನೆಡುವ ಕಮಿಟ್ ಮೆಂಟ್ ಪೂರೈಕೆ ಕಷ್ಟ ಎಂದು ಅರಿವಾದ ಹಿನ್ನೆಲೆಯಲ್ಲಿ ನಮ್ಮ ಪೋಸ್ಟ್ ಹಿಂಪಡೆದೆವು ಎಂದು ಸಂಸ್ಥೆ ಹೇಳಿಕೊಂಡಿತು.
ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತೆ ಈ ಸುಲಭ ಟಿಪ್ಸ್
ಪೋಸ್ಟ್ ಪ್ರಕಾರ ಪರಿಸರ ಜಾಗೃತಿಗಾಗಿ ಈ ಪ್ರಯತ್ನ ಮಾಡಲಾಯಿತು, ಆದರೆ ಜನಪ್ರಿಯ ವೆನಿಸಿದ ಕರೆಯನ್ನು ಈಡೇರಿಸಲು ಅಸಾಧ್ಯ ಎಂದು ಪೋಸ್ಟ್ ಹಿಂಪಡೆಯಲಾಯಿತೆಂದು ತಿಳಿದು ಬಂದಿದೆ. ಫಂಡ್ ರೈಸ್ ಮಾಡಿ ಸಸಿ ನೆಡುವ ಉದ್ದೇಶವೂ ಇತ್ತೆನ್ನಲಾಗಿದೆ.
ಇದೀಗ ಪೋಸ್ಟ್ ಡಿಲೀಟ್ ಆದರೂ ವೈರಲ್ ಆಗುವುದು ನಿಂತಿಲ್ಲ ಎಂಬುದು ವಿಶೇಷ. ಇನ್ ಸ್ಟಾ ಗ್ರಾಂ ಮಾತ್ರ ಈ ಕ್ಯಾಂಪೇನ್ ನಿಂದ ಅಂತರ ಕಾಯ್ದುಕೊಂಡಿದೆ.
https://www.instagram.com/p/CWCJp5upX80/?utm_source=ig_web_copy_link