alex Certify ಮಗುವಿಗೆ ನಿರ್ಜಲೀಕರಣ ಸಮಸ್ಯೆ ಕಾಡುತ್ತಿದ್ದರೆ ಕಾಣಿಸಿಕೊಳ್ಳುತ್ತೆ ಈ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿಗೆ ನಿರ್ಜಲೀಕರಣ ಸಮಸ್ಯೆ ಕಾಡುತ್ತಿದ್ದರೆ ಕಾಣಿಸಿಕೊಳ್ಳುತ್ತೆ ಈ ಸೂಚನೆ

ಮಗುವಿನ ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಮಗುವಿಗೆ ವಾಂತಿ, ಜ್ವರ ಇತರ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಮಗುವಿಗೆ ನಿರ್ಜಲೀಕರಣ ಸಮಸ್ಯೆ ಇರುವುದನ್ನು ಈ ಸಂಕೇತಗಳ ಮೂಲಕ ತಿಳಿದುಕೊಂಡು ಅದಕ್ಕೆ ಸರಿಯಾದ ಆರೈಕೆ ಮಾಡಿ ಮಗುವಿನ ಆರೋಗ್ಯ ಕಾಪಾಡಿ.

* ಮಕ್ಕಳು ನಿರ್ಜಲೀಕರಣಗೊಂಡಾಗ ಅವರ ಬಾಯಲ್ಲಿ ಲಾಲಾರಸದ ಉತ್ಪತ್ತಿ ಕಡಿಮೆಯಾಗಿ ಬಾಯಿ ಮತ್ತು ತುಟಿ ಒಣಗುತ್ತದೆ.

* ಮಕ್ಕಳು ಸಾಮಾನ್ಯವಾಗಿ ಹೆಚ್ಚು ಮೂತ್ರವಿಸರ್ಜನೆ ಮಾಡುತ್ತಾರೆ. ಹಾಗಾಗಿ ಮಗು ಸರಿಯಾಗಿ ಮೂತ್ರ ವಿಸರ್ಜನೆ ಮಾಡದಿದ್ದಾಗ ಮಗು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದೆ ಎಂದರ್ಥ.

* ಮಕ್ಕಳು ಅತ್ತಾಗ ಜೋರಾಗಿ ಕಣ್ಣೀರು ಸುರಿಯುತ್ತದೆ. ಆದರೆ ಮಗು ನಿರ್ಜಲೀಕರಣ ಸಮಸ್ಯೆಗೆ ಒಳಗಾಗಿದ್ದರೆ ಅತ್ತಾಗ ಕಣ್ಣೀರು ಕಡಿಮೆ ಬರುತ್ತದೆ.

* ಮಗುವಿನ ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಮಗುವಿಗೆ ಶಕ್ತಿ ಕಡಿಮೆಯಾಗಿ ಮಗುವಿನ ಚಟುವಟಿಕೆಗಳು ಕಡಿಮೆಯಾಗುತ್ತದೆ.

*ಮಗುವಿಗೆ ನಿರ್ಜಲೀಕರಣವಾದಾಗ ಮಗುವಿನ ಮಲ ಗಟ್ಟಿಯಾಗುತ್ತದೆ. ಇದರಿಂದ ಮಗುವಿಗೆ ಮಲ ವಿಸರ್ಜನೆ ಕಷ್ಟವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...