ಇತ್ತೀಚೆಗೆ ಚೀನಾದ ಶಾಂಘೈನಲ್ಲಿ ಒಂದು ವಿಚಿತ್ರವಾದ ವಿಷಯ ಬೆಳಕಿಗೆ ಬಂದಿದೆ. ಒಂದು ಟೆಕ್ ಕಂಪನಿಯಲ್ಲಿ 22 ಜನ ಉದ್ಯೋಗಿಗಳು ಕೆಲಸ ಮಾಡ್ತಾ ಇದ್ರಂತೆ. ಆದರೆ, ಯಾರೂ ಅವರನ್ನು ಕಂಡಿಲ್ಲ. ಹೌದು, ನೀವು ಕೇಳಿದ್ದು ಸರಿ. ಯಾರೂ ಅವರನ್ನ ನೋಡಿಲ್ಲ!
ಹೀಗಿದ್ರೂ, ಅವರ ಹಾಜರಾತಿಯನ್ನು ಪ್ರತಿದಿನ ದಾಖಲಿಸಲಾಗುತ್ತಿತ್ತು, ಅವರ ದಾಖಲೆಗಳನ್ನ ಸರಿಯಾಗಿ ನಿರ್ವಹಿಸಲಾಗುತ್ತಿತ್ತು, ಮತ್ತೆ ಸಂಬಳವನ್ನ ಸಮಯಕ್ಕೆ ಸರಿಯಾಗಿ ಕೊಡ್ತಾ ಇದ್ರಂತೆ. ಏನಪ್ಪಾ ಇದು ಭೂತದ ಕಥೆ ಅಂದುಕೊಂಡ್ರಾ? ಖಂಡಿತ ಇಲ್ಲ. ಇದು ಭ್ರಷ್ಟಾಚಾರದ ಕಥೆ.
ಈ ಕಂಪನಿಯ HR ಮ್ಯಾನೇಜರ್ ಉದ್ಯೋಗಿಗಳನ್ನ ನೇಮಕ ಮಾಡುವ ಮತ್ತು ತೆಗೆದು ಹಾಕುವ ಅಧಿಕಾರ ಹೊಂದಿದ್ರು. ಅವರು ಏನು ಮಾಡಿದ್ರು ಅಂದ್ರೆ, ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಿದ್ರು, ಆದರೆ ಅವರನ್ನ ಕಂಪನಿಯ ದಾಖಲೆಗಳಲ್ಲಿ ಹಾಗೇ ಇಟ್ಟಿದ್ರು. ಇದರಿಂದ ಏನಾಯ್ತು ಅಂದ್ರೆ, 22 ಜನ ಉದ್ಯೋಗಿಗಳು ಕೆಲಸ ಮಾಡದೆ ಸಂಬಳ ಪಡೆಯುತ್ತಿದ್ದರು ಅಂದ್ರೆ ಅವರ ಹೆಸರಿನಲ್ಲಿ ಹೆಚ್ ಆರ್ ಮ್ಯಾನೇಜರ್ ಇದನ್ನು ಕಬಳಿಸುತ್ತಿದ್ದ.
ಹೀಗೆ, ಸುಮಾರು ಎಂಟು ವರ್ಷಗಳಲ್ಲಿ, ಆ HR ಮ್ಯಾನೇಜರ್ 20 ಕೋಟಿ ರೂಪಾಯಿಗಳನ್ನ ಕಬಳಿಸಿದ್ರು. ಕೊನೆಗೆ, 2022 ರಲ್ಲಿ ಈ ವಿಷಯ ಬೆಳಕಿಗೆ ಬಂತು. ಆ HR ಮ್ಯಾನೇಜರ್ಗೆ 10 ವರ್ಷ 2 ತಿಂಗಳು ಜೈಲು ಶಿಕ್ಷೆ ಜೊತೆಗೆ 3 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗಿದೆ. ಆದರೆ, ಕಬಳಿಸಿದ ಹಣಕ್ಕೆ ಹೋಲಿಸಿದರೆ ಈ ದಂಡ ತುಂಬಾ ಕಡಿಮೆ.