ಭಾರತದಲ್ಲಿ ಅನೇಕ ಐಷಾರಾಮಿ ಹೋಟೆಲ್‌ಗಳಿವೆ. ಅವುಗಳಲ್ಲಿ ಮುಂಬೈನ ಔರಿಕಾ ಮುಂಬೈ ಸ್ಕೈಸಿಟಿ ಹೋಟೆಲ್ ಅತಿ ಹೆಚ್ಚು ಕೊಠಡಿಗಳನ್ನು ಹೊಂದಿರುವ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೋಟೆಲ್ ಸುಮಾರು 669 ಕೊಠಡಿಗಳನ್ನು ಹೊಂದಿದೆ. ಇದು ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಟರ್ಮಿನಲ್ 2) ಬಳಿ ಇದೆ. ಇದು ರೆಸ್ಟೋರೆಂಟ್‌ಗಳು, ಈಜುಕೊಳ, ಸ್ಪಾ, ಸಲೂನ್ ಮತ್ತು ಫಿಟ್‌ನೆಸ್ ಸೆಂಟರ್‌ನಂತಹ ಸೌಲಭ್ಯಗಳನ್ನು ಹೊಂದಿದೆ. ಅಮೇರಿಕನ್ ಆನ್‌ಲೈನ್ ಟ್ರಾವೆಲ್ ಏಜೆನ್ಸಿ ಟ್ರಿಪ್ ಅಡ್ವೈಸರ್ ಔರಿಕಾ ಮುಂಬೈ ಸ್ಕೈಸಿಟಿ ಹೋಟೆಲ್‌ಗೆ 5-ಸ್ಟಾರ್ ರೇಟಿಂಗ್ ನೀಡಿದೆ.
ಈ ಹೋಟೆಲ್‌ನ ಕೊಠಡಿ ದರಗಳು 7,920 ರೂ.ಗಳಿಂದ ಪ್ರಾರಂಭವಾಗಿ ಪ್ರತಿ ರಾತ್ರಿಗೆ 20,790 ರೂ.ವರೆಗೆ ಇರುತ್ತದೆ. ಈ ಹೋಟೆಲ್ ಮುಂಬೈ ಏರ್‌ಪೋರ್ಟ್ ಇಂಟರ್‌ನ್ಯಾಷನಲ್ – ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಟರ್ಮಿನಲ್ 2) ಬಳಿಯ ಅತ್ಯುತ್ತಮ ಹೋಟೆಲ್‌ಗಳಲ್ಲಿ ಒಂದಾಗಿದೆ. ಹೋಟೆಲ್‌ನ ಕಾರ್ಯತಂತ್ರದ ಸ್ಥಳವು ಪ್ರಮುಖ ಸಾರಿಗೆ ಕೇಂದ್ರಗಳು, ಕಾರ್ಪೊರೇಟ್ ಕೇಂದ್ರಗಳು ಮತ್ತು ಮುಂಬೈನ ಜನಪ್ರಿಯ ಪ್ರವಾಸಿ ಆಕರ್ಷಣೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ.
ಇದಲ್ಲದೆ, ಭಾರತದಲ್ಲಿ ಹಲವಾರು ಐಷಾರಾಮಿ ಹೋಟೆಲ್‌ಗಳಿವೆ. ಅವುಗಳಲ್ಲಿ ಕೆಲವು ಪ್ರಸಿದ್ಧವಾದವುಗಳ ಪಟ್ಟಿ ಈ ಕೆಳಗಿನಂತಿದೆ.
- ತಾಜ್ ಹೋಟೆಲ್: ಇದು ರತನ್ ಟಾಟಾ ಅವರ ಸಾಂಪ್ರದಾಯಿಕ ಹೋಟೆಲ್. ಇದು 600 ಕೊಠಡಿಗಳನ್ನು ಹೊಂದಿದೆ.
- ರಾಡಿಸನ್ ಹೋಟೆಲ್: ಭಾರತದಲ್ಲಿ ರಾಡಿಸನ್ ಹೋಟೆಲ್ ಗಳು ಹಲವು ಕಡೆಗಳಲ್ಲಿ ಇವೆ.
- ಉಮೈದ್ ಭವನ ಅರಮನೆ, ಜೋಧಪುರ: ರಾಜಸ್ಥಾನದ ಜೋದಪುರದಲ್ಲಿರುವ 26 ಎಕರೆ ಪ್ರದೇಶದಲ್ಲಿ ಹರಡಿರುವ ಐಷಾರಾಮಿ ಉಮೈದ್ ಭವನ ಅರಮನೆ 1929ರಲ್ಲಿ ಮಹಾರಾಜ ಉಮೈದ್ ಸಿಂಗ್‌ನಿಂದ ನಿರ್ಮಿಸಲ್ಪಟ್ಟಿದೆ. ಸುಮಾರು 347 ಕೊಠಡಿಗಳನ್ನು ಹೊಂದಿರುವ ಈ ಐಷಾರಾಮಿ ನಿವಾಸವು ಜೋಧ್‌ಪುರ ರಾಜಮನೆತನದ ಮುಖ್ಯ ನಿವಾಸವೆನ್ನಿಸಿಕೊಂಡಿದೆ.
- ಪಾರ್ಕ್ ಹಯಾತ್ ಹೈದರಾಬಾದ್: ಇದು ಭಾರತದ ಹೈದರಾಬಾದ್ ನ ಬಂಜಾರ ಹಿಲ್ಸ್ ನೆರೆಹೊರೆಯಲ್ಲಿ ಇರುವ ಒಂದು ಐಶಾರಾಮಿ ಹೋಟೆಲ್ ಆಗಿದೆ. ಇದು 185 ಕೊಠಡಿಗಳನ್ನು ಹೊಂದಿದೆ.
ಭಾರತದಲ್ಲಿ ಅತಿ ಹೆಚ್ಚು ಫೈವ್ ಸ್ಟಾರ್ ಹೋಟೆಲ್‌ಗಳನ್ನು ಹೊಂದಿರುವ ರಾಜ್ಯ ಕೇರಳ. ಪ್ರವಾಸಿಗರು ಮತ್ತು ಕಾರ್ಪೊರೇಟ್‌ಗಳಿಗೆ ಅನುಕೂಲಕರ ಸ್ಥಳಗಳೆಂದೇ ಜನಪ್ರಿಯವಾಗಿರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗೋವಾದಂತಹ ರಾಜ್ಯಗಳನ್ನೇ ಕೇರಳ ಹಿಂದಿಕ್ಕಿದೆ.