ಆರೋಗ್ಯಕರವಾದ ಹೊಳೆಯುವ ಹಲ್ಲುಗಳು ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಬಳಸುವ ಬದಲು ಮನೆಯಲ್ಲಿಯೇ ಈ ಟೂತ್ ಪೇಸ್ಟ್ ತಯಾರಿಸಿ ಬಳಸಿ.
ಕಲ್ಲುಪ್ಪು 75ಗ್ರಾಂ, ಲವಂಗ ಎಣ್ಣೆ 5ಗ್ರಾಂ, ನೀಲಗಿರಿ ತೈಲ 5ಗ್ರಾಂ, ಪುದೀನ 5 ಗ್ರಾಂ, ಅರಿಶಿನ ಪುಡಿ 10ಗ್ರಾಂ, ಸಾಸಿವೆ ಎಣ್ಣೆ ಸ್ವಲ್ಪ. ಇವಿಷ್ಟನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ ಇದರಿಂದ ಪ್ರತಿದಿನ ದಿನಕ್ಕೆ 2 ಬಾರಿ ಹಲ್ಲುಜ್ಜಿ.
ಇದರಿಂದ ಹಲ್ಲುಗಳು ಗಟ್ಟಿಯಾಗಿರುತ್ತದೆ. ಹುಳುಕು ಸಮಸ್ಯೆ , ಹಲ್ಲು ಹಳದಿಯಾಗುವ ಸಮಸ್ಯೆ, ಜುಮ್ಮೆನ್ನುವ ಸಮಸ್ಯೆ ದೂರವಾಗುತ್ತದೆ.