ಕೂದಲು ಉದುರುವ ಸಮಸ್ಯೆ ಇಲ್ಲದಿರುವವರೇ ಇಲ್ಲವೇನೋ. ಕೂದಲು ಉದುರದಂತೆ ಮನೆಯಲ್ಲೇ ಕೇಶ ತೈಲವನ್ನು ಹೇಗೆ ಮಾಡಬಹುದು ಎನ್ನುವುದನ್ನು ತಿಳಿಯೋಣ.
ಕೊಬ್ಬರಿ ಎಣ್ಣೆಗೆ, ಹರಳೆಣ್ಣೆ ಬೆರೆಸಿ. ಇದರ ಜೊತೆಗೆ ಎರಡು ಹಿಡಿಯಷ್ಟು ಭೃಂಗರಾಜ ಎಲೆಯನ್ನು ಹಾಕಿ. ಇದರಲ್ಲಿ ಅತ್ಯದ್ಭುತ ಔಷಧಿ ಗುಣಗಳಿವೆ. ಇದರ ಜೊತೆಗೆ ಸಣ್ಣ ಗಿಡ ಅಥವಾ ಅರಕೆ ಸೊಪ್ಪಿನ ಗಿಡದ ಹೂವನ್ನು ಒಂದು ಹಿಡಿಯಷ್ಟು ಸೇರಿಸಿ.
ಅದಕ್ಕೆ 4 ರಿಂದ 5 ಬೆಟ್ಟದ ನೆಲ್ಲಿ ಕಾಯಿಯ ರಸ ತೆಗೆದು ಹಾಕಿ. ಇದರ ಜೊತೆಗೆ ಮಂದಾರ ಹೂವು, ಮದರಂಗಿ ಸೊಪ್ಪು ಒಂದು ಹಿಡಿಯಷ್ಟು ರಸ ತೆಗೆದಿಡಿ. ಇವೆಲ್ಲಾ ರಸವನ್ನು ಕೊಬ್ಬರಿ ಎಣ್ಣೆ ಮತ್ತು ಹರಳೆಣ್ಣೆಗೆ ಬೆರೆಸಿ ಕುದಿಸಿ ನೀರಿನಂಶ ಹೋಗಿ ಎಣ್ಣೆ ಉಳಿಯುವವರೆಗೂ ಕುದಿಸಿ. ನಂತರ ತಣ್ಣಗಾಗಲು ಬಿಟ್ಟು ಶೋಧಿಸಿ ಇಟ್ಟುಕೊಳ್ಳಿ.
ಈ ಎಣ್ಣೆಯನ್ನು ನಿರಂತರವಾಗಿ ತಲೆ ಕೂದಲಿಗೆ ಹಚ್ಚುವುದರಿಂದ ನಿದ್ರಾಹೀನತೆ, ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ ಅಲ್ಲದೆ ಕೂದಲು ಉದುರುವುದು ನಿಂತು ದಟ್ಟವಾದ ಕೂದಲು ಬೆಳೆಯುತ್ತದೆ.