alex Certify ಸಂಧಿವಾತ ಸಮಸ್ಯೆಗೆ ಮನೆಯಲ್ಲೇ ತಯಾರಿಸಿ ಈ ಪಾನೀಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಧಿವಾತ ಸಮಸ್ಯೆಗೆ ಮನೆಯಲ್ಲೇ ತಯಾರಿಸಿ ಈ ಪಾನೀಯ

ಭಾರತದಲ್ಲಿ ಹೆಚ್ಚು ಜನರು ಸಂಧಿವಾತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಧುಮೇಹ, ಏಡ್ಸ್ ಮತ್ತು ಕ್ಯಾನ್ಸರ್‌ನಂತಹ ಅನೇಕ ರೋಗಗಳು ಹೆಚ್ಚಿನ ಪ್ರಮಾಣದಲ್ಲಿದೆ.

ಭಾರತೀಯ ಜನಸಂಖ್ಯೆಯ ಸುಮಾರು 14 ಪ್ರತಿಶತದಷ್ಟು ಜನರು ಈ ಸಂಧಿವಾತಕ್ಕೆ ಪ್ರತಿ ವರ್ಷ ವೈದ್ಯರನ್ನು ಸಂಪರ್ಕಿಸುತ್ತಾರೆ.

ಸಂಧಿವಾತದ ಸಮಸ್ಯೆ ನಿವಾರಿಸಲು ಮನೆಯಲ್ಲೇ ಪೈನಾಪಲ್ ಪಾನೀಯ ತಯಾರಿಸಬಹುದು. ಇದು ಉರಿಯೂತವನ್ನು ಹಿಮ್ಮೆಟ್ಟಿಸುವುದಲ್ಲದೆ, ಕೀಲು ನೋವಿನಂತಹ ರೋಗಲಕ್ಷಣಗಳನ್ನು ಕೂಡ ತ್ವರಿತವಾಗಿ ನಿವಾರಿಸುತ್ತದೆ.

ಅನಾನಸ್: ವಿಟಮಿನ್ ಸಿ ಮತ್ತು ಬ್ರೊಮೆಲಿನ್ ಎಂಬ ಕಿಣ್ವದ ಅದ್ಭುತ ಮೂಲ ಹೊಂದಿರುವ ಈ ಹಣ್ಣು, ರುಮಟಾಯ್ಡ್ ಸಂಧಿವಾತದಲ್ಲಿ ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಬ್ರೋಮೆಲಿನ್ ಎಂಬುದು ಅನಾನಸ್ ಗಿಡದ ಹಣ್ಣು ಮತ್ತು ಕಾಂಡದಲ್ಲಿ ಕಂಡುಬರುವ ಕಿಣ್ವಗಳ ಗುಂಪಾಗಿದೆ. ಅನಾನಸ್ ಅನ್ನು ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಐತಿಹಾಸಿಕವಾಗಿ, ಮಧ್ಯ ಮತ್ತು ದಕ್ಷಿಣ ಅಮೆರಿಕದ ಸ್ಥಳೀಯರು ಅನಾನಸ್ ಅನ್ನು ಜೀರ್ಣಕಾರಿ ಅಸ್ವಸ್ಥತೆಗಳಂತಹ ವಿವಿಧ ಕಾಯಿಲೆಗಳಿಗೆ ಬಳಸುತ್ತಿದ್ದರು.

ಅನಾನಸ್‌ನಲ್ಲಿರುವ ಬ್ರೋಮೆಲಿನ್ ಕೇವಲ ನೋವು ನಿವಾರಣೆಗೆ ಮತ್ತು ಉರಿಯೂತವನ್ನು ತಗ್ಗಿಸಲು ಮಾತ್ರವಲ್ಲ, ಮೂಗು ಮತ್ತು ಸೈನಸ್‌ಗಳು, ಒಸಡುಗಳು ಇತರ ಭಾಗಗಳಿಗೆ ಉಪಯುಕ್ತವಾಗಿದೆ.

ಸಂಧಿವಾತವನ್ನು ನಿರ್ವಹಿಸಲು ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಆರೋಗ್ಯಕರ ಆಹಾರವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಿಮಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ. ಹಣ್ಣುಗಳು ಮತ್ತು ತರಕಾರಿಗಳು, ಮೀನು, ಮಾಂಸ, ಮೊಟ್ಟೆ ಮತ್ತು ಬೀನ್ಸ್ ಮತ್ತು ಹಾಲು ಮತ್ತು ಡೈರಿ ಆಹಾರಗಳನ್ನು ಮಿತವಾಗಿ ಸೇವಿಸಿ.

ಅಧಿಕ ತೂಕವು ನಿಮ್ಮ ಸೊಂಟ, ಮೊಣಕಾಲು, ಮತ್ತು ಪಾದಗಳಲ್ಲಿ ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಇದು ನೋವು ಮತ್ತು ಚಲನಶೀಲತೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಚೆನ್ನಾಗಿ ವಿಶ್ರಾಂತಿ ಪಡೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...