ಸಕ್ಕರೆ ಕಾಯಿಲೆ ಒಮ್ಮೆ ವಕ್ಕರಿಸಿಕೊಂಡ್ರೆ ಜೀವನ ಪರ್ಯಂತ ಅದರಿಂದ ಮುಕ್ತಿ ಪಡೆಯುವುದು ಕಷ್ಟ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವು ಅಧಿಕವಾಗಿದ್ದರೆ, ಸಕ್ಕರೆಯ ಮಟ್ಟವು ತಕ್ಷಣವೇ ಹೆಚ್ಚಾಗಲು ಪ್ರಾರಂಭಿಸುತ್ತದೆ. ಮಧುಮೇಹದ ಚಿಕಿತ್ಸೆಗಾಗಿ ಸಾಮಾನ್ಯವಾಗಿ ಎಲ್ಲರೂ ಔಷಧಿಗಳ ಮೇಲೆ ಅವಲಂಬಿತರಾಗುತ್ತಾರೆ.
ಈ ಔಷಧಿಗಳು ಅನೇಕ ಹೊಸ ರೋಗಗಳಿಗೆ ಕಾರಣವಾಗುತ್ತವೆ. ಹಾಗಾಗಿ ನೈಸರ್ಗಿಕ ವಿಧಾನಗಳಿಂದಲೂ ಮಧುಮೇಹವನ್ನು ನಿಯಂತ್ರಿಸುವುದು ಉತ್ತಮ. ನಮ್ಮ ಮನೆಯಲ್ಲೇ ಇರುವ ಕೆಲವು ವಸ್ತುಗಳ ಸಹಾಯದಿಂದ ಚೂರ್ಣವನ್ನು ತಯಾರಿಸಿ ಸೇವನೆ ಮಾಡಬಹುದು.
ನೆಲ್ಲಿಕಾಯಿ ಚೂರ್ಣ: ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ನೆಲ್ಲಿಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಈ ಪೋಷಕಾಂಶಗಳು ಚಯಾಪಚಯವನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತವೆ.
ಮೆಂತ್ಯ ಚೂರ್ಣ: ಮೆಂತ್ಯದ ಕಾಳುಗಳು ಮಧುಮೇಹಕ್ಕೆ ಪ್ರಯೋಜನಕಾರಿ. ಮೆಂತ್ಯವನ್ನು ಸ್ವಲ್ಪ ಹುರಿದು ಪುಡಿ ಮಾಡಿ ಪ್ರತಿದಿನ ಬೆಳಗ್ಗೆ ಒಂದು ಚಮಚ ತಿನ್ನುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಮೆಂತ್ಯವು ದೇಹದಲ್ಲಿ ಇನ್ಸುಲಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
ದಾಲ್ಚಿನ್ನಿ ಚೂರ್ಣ: ದಾಲ್ಚಿನ್ನಿ ನೈಸರ್ಗಿಕ ಜೈವಿಕ ಸಕ್ರಿಯಗಳನ್ನು ಹೊಂದಿರುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಬಲ್ಲದು. ದಾಲ್ಚಿನ್ನಿಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಪ್ರತಿದಿನ ಬೆಳಿಗ್ಗೆ ಒಂದು ಚಮಚ ತಿನ್ನಿರಿ.
ನೇರಳೆ ಬೀಜದ ಚೂರ್ಣ: ನೇರಳೆ ಬೀಜ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದರ ಬೀಜಗಳು ಮಧುಮೇಹಕ್ಕೂ ಪ್ರಯೋಜನಕಾರಿ. ಎಂಟಿಒಕ್ಸಿಡೆಂಟ್‌ಗಳು ಈ ಬೀಜಗಳಲ್ಲಿ ಹೇರಳವಾಗಿ ಇರುತ್ತವೆ. ನೇರಳೆ ಬೀಜಗಳ ಪುಡಿಯನ್ನು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು.
ನುಗ್ಗೇ ಎಲೆಯ ಚೂರ್ಣ: ಸಕ್ಕರೆ ಕಾಯಿಲೆ ಇರುವವರಿಗೆ ನುಗ್ಗೇಕಾಯಿ ಸೇವನೆ ಅತ್ಯಂತ ಸೂಕ್ತ. ನುಗ್ಗೇ ಹೂವುಗಳು, ಕಾಂಡಗಳು ಮತ್ತು ಎಲೆಗಳು ಕೂಡ ಆಯುರ್ವೇದ ಗುಣಗಳನ್ನು ಹೊಂದಿದ್ದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನುಗ್ಗೇ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು ಸೇವಿಸುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.