ಚರ್ಮವು ಆರೋಗ್ಯವಾಗಿದ್ದರೆ ನಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಆದರೆ ಕೆಲವರ ಚರ್ಮವು ಅತ್ಯಂತ ಸೂಕ್ಷ್ಮವಾಗಿ, ಅಲ್ಲಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗುತ್ತದೆ. ಕೆಲವರು ಇದನ್ನು ಮೇಕಪ್ ನಿಂದ ಕವರ್ ಮಾಡುತ್ತಾರೆ. ಆದರೆ ಇದು ಮತ್ತಷ್ಟು ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅದರ ಬದಲು ಚರ್ಮದಲ್ಲಿರುವ ವಿಷ ಅಂಶಗಳನ್ನು ಹೊರಹಾಕಿ ಚರ್ಮವನ್ನು ಶುದ್ಧವಾಗಿಸಬೇಕು. ಅದಕ್ಕಾಗಿ ಈ ಮನೆಮದ್ದನ್ನು ಸೇವಿಸಬೇಕು.
*ಅನಾನಸ್ ಚರ್ಮದ ಆರೋಗ್ಯ ಕಾಪಾಡಿ ಯೌವನವನ್ನು ಪಡೆಯಲು ಸಹಕಾರಿ. ಇದು ರಕ್ತದಲ್ಲಿನ ವಿಷ ಅಂಶಗಳನ್ನು ಹೊರಹಾಕುತ್ತದೆ. ನಿಮ್ಮ ಚರ್ಮವು ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಚರ್ಮದಲ್ಲಿ ಕಂಡುಬರುವ ಉರಿಯೂತ, ನೋವು ಕಡಿಮೆಯಾಗುತ್ತದೆ.
*ನಿಂಬೆಹಣ್ಣು… ಚರ್ಮದ ಆರೋಗ್ಯವನ್ನು ಉತ್ತೇಜಿಸುವ ಗುಣಗಳನ್ನು ಹೊಂದಿದೆ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದರಲ್ಲಿ ವಿಟಮಿನ ಸಿ ಅಧಿಕವಾಗಿರುವುದರಿಂದ ಇದು ಸುಕ್ಕುಗಳನ್ನು ಮತ್ತು ಮಚ್ಚೆಗಳನ್ನು ಕಡಿಮೆ ಮಾಡುತ್ತದೆ.
*ಅರಶಿನವು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಇದು ರಕ್ತದಲ್ಲಿರುವ ವಿಷವನ್ನು ಹೊರಹಾಕಿ ರಕ್ತವನ್ನು ಶುದ್ದೀಕರಿಸುತ್ತದೆ. ಇದರಿಂದ ಚರ್ಮ ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ನೀರಿಗೆ 1 ಇಂಚು ಶುಂಠಿ, 1 ಚಮಚ ಅರಶಿನ ಹಾಕಿ ಕುದಿಸಿ ಚಹಾ ತಯಾರಿಸಿ ಕುಡಿಯಿರಿ.