ವಾತಾವರಣ ಬದಲಾಗುತ್ತಿದ್ದ ಹಾಗೇ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಇವುಗಳನ್ನು ಮಕ್ಕಳಿಗೆ ನೀಡಿ.
*ತುಳಸಿ ಎಲೆಗೆ ಬೆಲ್ಲವನ್ನು ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ನೀಡಿ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
* ಜೇನುತುಪ್ಪದೊಂದಿಗೆ ಶುಂಠಿ ರಸವನ್ನು ಮಕ್ಕಳಿಗೆ ನೀಡಿ. ಇದು ಬ್ಯಾಕ್ಟೀರಿಯಾಗಳನ್ನು ದೂರವಿರಿಸುತ್ತದೆ.
*ಮಕ್ಕಳಿಗೆ ಸದಾ ಏಲಕ್ಕಿ, ಲವಂಗ, ಶುಂಠಿ, ಅರಿಶಿನ ಮುಂತಾದವುಗಳನ್ನು ನೀರಿನಲ್ಲಿ ಕುದಿಸಿ ನೀಡಿ. ಇದರಿಂದ ಮಕ್ಕಳ ಪ್ರತಿರೋಧ ಶಕ್ತಿ ಹೆಚ್ಚಾಗಿ ರೋಗಗಳಿಂದ ರಕ್ಷಿಸುತ್ತದೆ.