ಬದಲಾಗುತ್ತಿರುವ ವಾತಾವರಣ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರ್ತಿದೆ. ಅನೇಕರಿಗೆ ಧೂಳು ಶತ್ರು. ಧೂಳು ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಅನೇಕ ರೀತಿಯ ಅಲರ್ಜಿಗಳು ಕಂಡು ಬರ್ತಿರುತ್ತೆ. ಧೂಳಿನಿಂದ ಚರ್ಮದ ಅಲರ್ಜಿ, ಶೀತ, ನೆಗಡಿ, ಕೆಮ್ಮು, ಅಸ್ತಮಾ ಕಾಡುತ್ತದೆ.
ಡ್ರಸೀನಾ ಅಥವಾ ಡ್ರಾಗನ್ ಪ್ಲಾಂಟ್ ಇವು ಅಲರ್ಜಿ ಸ್ನೇಹಿ ಗಿಡಗಳು. ಇವುಗಳ ಎಲೆಯಲ್ಲಿ ಅಲರ್ಜಿಕಾರಕ ಅಂಶಗಳನ್ನ ತಡೆದು ಹಿಡಿದಿಡುವ ಶಕ್ತಿ ಇರುತ್ತೆ. ಆದ್ದರಿಂದ ಇಂತಹ ಗಿಡಗಳನ್ನ ಬೆಳೆಸುವುದು ತುಂಬಾ ಉಪಯೋಗಕಾರಿ.
ಆ್ಯಪಲ್ ವಿನೆಗರ್ ನಲ್ಲಿ ಕಫಹಾರಿ ಗುಣಗಳಿದ್ದು, ಧೂಳಿನ ಅಲರ್ಜಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಅದರ ಸೂಕ್ಷ್ಮಜೀವಿ ನಿರೋಧಕ ಗುಣಗಳು ಈ ಅಲರ್ಜಿಯು ಹೆಚ್ಚಾಗುವುದನ್ನ ನಿಯಂತ್ರಣದಲ್ಲಿಡುತ್ತದೆ. ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಎರಡು ಚಮಚ ಆ್ಯಪಲ್ ಸಿಡರ್ ವಿನೆಗರ್ ಸೇರಿಸಿಕೊಂಡು ಕುಡಿದರೆ ಅಲರ್ಜಿಯ ಸಮಸ್ಯೆಯಿಂದ ದೂರ ಇರಬಹುದು.
ತುಪ್ಪದ ಸೇವನೆ ಉತ್ತಮ. ತುಪ್ಪದ ಸೇವನೆಯು ನಿರಂತರ ಸೀನುವಿಕೆಗೆ ಅಂತ್ಯ ಹೇಳುತ್ತದೆ. ಧೂಳಿನ ಸಮಸ್ಯೆಯಿಂದ ದೂರ ಇರಲು ಕಾಲು ಟೇಬಲ್ಸ್ಪೂನ್ನಷ್ಟು ತುಪ್ಪವನ್ನ ಸೇವಿಸಿದರೆ ತಕ್ಷಣ ನೆಮ್ಮದಿ ದೊರೆಯುತ್ತೆ.