ಹವಾಮಾನ ಬದಲಾವಣೆಯಾದಾಗ, ಚಳಿಗಾಲದಲ್ಲಿ ತಂಪಾದ ಗಾಳಿಯ ಕಾರಣದಿಂದ ಹೆಚ್ಚಾಗಿ ಮಕ್ಕಳ ಆರೋಗ್ಯ ಕೆಡುತ್ತದೆ. ಮಕ್ಕಳಿಗೆ ಶೀತ ಕಫದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮಕ್ಕಳಿಗೆ ಈ ಮನೆಮದ್ದು ನೀಡಿ.
*ಶುಂಠಿ ಮತ್ತು ದಾಲ್ಚಿನ್ನಿ : ಇದು ಶೀತ ಮತ್ತು ಕಫದ ಸಮಸ್ಯೆಯಿಂದ ಮಕ್ಕಳನ್ನು ಕಾಪಾಡುತ್ತದೆ. ಹಾಗಾಗಿ ನೀರಿಗೆ ಶುಂಠಿ ಮತ್ತು ದಾಲ್ಚಿನ್ನಿ ಹಾಕಿ ಕುದಿಸಿ. ಆ ನೀರನ್ನು ಮಕ್ಕಳಿಗೆ ಕುಡಿಸಿ.
*ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ : ಬೆಳ್ಳುಳ್ಳಿಯನ್ನು ಜಜ್ಜಿ ಸಾಸಿವೆ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಸ್ವಲ್ಪ ಬಿಸಿ ಮಾಡಿ ಮಕ್ಕಳ ದೇಹಕ್ಕೆ ಮಸಾಜ್ ಮಾಡಿ. ಇದರಿಂದ ಶೀತ ಕಫದ ಸಮಸ್ಯೆ ದೂರವಾಗುವುದಲ್ಲದೇ ಮಕ್ಕಳ ಮೂಳೆಗಳು ಗಟ್ಟಿಯಾಗುತ್ತದೆ.
*ಜೇನುತುಪ್ಪ ಮತ್ತು ಈರುಳ್ಳಿ : ಮಕ್ಕಳ ದೇಹ ಬೆಚ್ಚಗಿರಲು ಹಾಲಿಗೆ ಜೇನುತುಪ್ಪ ಮಿಕ್ಸ್ ಮಾಡಿ ಕುಡಿಸಿ. ಇದರಿಂದ ಶೀತ, ಕಫದ ಸಮಸ್ಯೆ ಮಕ್ಕಳ ಬಳಿ ಸುಳಿಯಲ್ಲ. ಹಾಗೇ ಮಕ್ಕಳಿಗೆ ತುಂಬಾ ಶೀತ, ಕಫ, ಕೆಮ್ಮು ಇದ್ದರೆ ಈರುಳ್ಳಿ ರಸ ತೆಗೆದು ಜೇನುತುಪ್ಪದಲ್ಲಿ ಮಿಕ್ಸ್ ಮಾಡಿ ಕುಡಿಸಿ.