ಕಪ್ಪು ಕಲೆಗಳು ದಿನನಿತ್ಯದ ಅತಿಯಾದ ಧೂಳು, ಕೆಟ್ಟ ಹವಾಮಾನ, ಹೆಚ್ಚಿದ ಬಿಸಿಲಿನಿಂದ ಆಗುವ ಸಾಧ್ಯತೆ ಜಾಸ್ತಿ.
ಮುಖದ ಮೇಲೆ ಕಾಣುವ ಕಪ್ಪುಕಲೆಯನ್ನು ಭಂಗು ಎಂದು ಕರೆಯಲಾಗುತ್ತದೆ.
ಬಿಸಿಲಿಗೆ ಹೋದರೆ ಇದು ಹೆಚ್ಚಾಗುವ ಸಾಧ್ಯತೆ ಜಾಸ್ತಿ. ಇದನ್ನು ಹೋಗಲಾಡಿಸಲು ಮನೆಯಲ್ಲಿ ಕೆಲವು ಮದ್ದು ಮಾಡಿ ಪರಿಹಾರ ಕಂಡುಕೊಳ್ಳಬಹುದು.
* ಮೊಸರಿಗೆ ಕಡಲೆಹಿಟ್ಟು, ಅರಿಶಿಣ ಸೇರಿಸಿ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಮುಖ ತೊಳೆಯಬೇಕು. ಒಂದು ತಿಂಗಳು ನಿರಂತರವಾಗಿ ಹೀಗೆ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದು.
* ಕಿತ್ತಳೆಹಣ್ಣಿನ ಪುಡಿಗೆ ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಕಿತ್ತಳೆ ಹಣ್ಣಿನ ಪುಡಿ ಅಂಗಡಿಗಳಲ್ಲಿ ದೊರೆಯುತ್ತದೆ.
* ಮನೆಯಲ್ಲಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ಆ ಪುಡಿಗೆ ಮೊಸರು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು.
* ಕಸ್ತೂರಿ ಅರಿಶಿಣ ಪುಡಿ, ಹೆಸರುಕಾಳು ಸೇರಿಸಿ ಹಿಟ್ಟು ಮಾಡಿಸಿ ದಿನವೂ ಮುಖಕ್ಕೆ ಹಚ್ಚಿಕೊಂಡು ತೊಳೆದರೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು.
* ಹಾಲಿಗೆ ಅರಿಶಿಣ ಸೇರಿಸಿ ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಮುಖ ತೊಳೆದುಕೊಳ್ಳಬೇಕು.
* ಸೊಪ್ಪು, ಕ್ಯಾರೆಟ್, ಬೀಟ್ ರೂಟ್, ಹಣ್ಣಿನ ಜ್ಯೂಸುಗಳನ್ನು ತಪ್ಪದೇ ಉಪಯೋಗಿಸಬೇಕು.