ಮಳೆಗೆ ಹೋಗಿ ಬಂದ ತಕ್ಷಣ ಅಥವಾ ಒದ್ದೆಯಾದ ತಕ್ಷಣ ಶೀತದ ಲಕ್ಷಣಗಳು ಕಂಡುಬರುತ್ತವೆ. ಇದರ ನಿವಾರಣೆಗೆ ಪ್ರತಿಬಾರಿ ವೈದ್ಯರ ಬಳಿ ತೆರಳಬೇಕಿಲ್ಲ. ಮನೆಯಲ್ಲೇ ಕೆಲವು ಮದ್ದುಗಳನ್ನು ಪ್ರಯತ್ನಿಸಿ ನೋಡಿ.
ಮಳೆಯಲ್ಲಿ ಒದ್ದೆಯಾಗಿ ಮರಳಿದ ತಕ್ಷಣ ಶುಭ್ರವಾದ ಒಣ ಬಟ್ಟೆಯಿಂದ ತಲೆಯನ್ನು ಒರೆಸಿಕೊಳ್ಳಿ. ಬಳಿಕ ಕರಿಮೆಣಸು ಚಹಾ ಕುಡಿಯಿರಿ. ಇದು ಸೀನುವುದರಿಂದ ಹಾಗೂ ನೆಗಡಿಯಿಂದ ಪರಿಹಾರ ನೀಡುತ್ತದೆ. ಎದೆಯಲ್ಲಿ ಕಫ ಕಟ್ಟಿದರೆ ಅದನ್ನು ಕರಗಿಸುತ್ತದೆ.
ಚಿಟಿಕೆ ಅರಶಿನ ಬೆರೆಸಿದ ಹಾಲನ್ನು ಕುಡಿಯುವುದರಿಂದಲೂ ಶೀತವನ್ನು ದೂರ ಮಾಡಬಹುದು. ಬಿಸಿ ನೀರಿಗೆ ಚಿಟಿಕೆ ಅರಿಶಿನ ಸೇರಿಸಿ ಗಾರ್ಗಲ್ ಮಾಡುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
ನೀರಿಗೆ ಶುಂಠಿ ಹಾಗೂ ತುಳಸಿ ಎಲೆಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ ಸೋಸಿ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಕೆಮ್ಮುವಿನ ಹಾಗೂ ಉಸಿರಾಟದ ಸಮಸ್ಯೆ ದೂರವಾಗುತ್ತದೆ. ಇದನ್ನು ದಿನಕ್ಕೆ ಎರಡು ಬಾರಿಯೂ ಸೇವಿಸಬಹುದು. ಕುದಿಯುವ ನೀರಿಗೆ ಎರಡು ಹನಿ ನೀಲಗಿರಿ ತೈಲ ಹಾಕಿ ಇದರ ಹಬೆಯನ್ನು ಮೂಗಿನ ಮೂಲಕ ತೆಗೆದುಕೊಳ್ಳುವುದರಿಂದ ಕಫ ಕರಗುತ್ತದೆ.