
ಅನೇಕರಿಗೆ ಯಾವುದೆ ಔಷಧಿ ಪರಿಣಾಮ ಬೀರುವುದಿಲ್ಲ. ಅಂತವರಿಗೊಂದು ಉತ್ತಮ ಮನೆ ಮದ್ದು ಇಲ್ಲಿದೆ. ಪಾದಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಯೂ ಇದರಿಂದ ದೂರವಾಗುತ್ತದೆ.
ಈ ಮನೆ ಮದ್ದು ಮಾಡಲು ಬೇಕಾಗುವ ಪದಾರ್ಥ :
ಒಂದು ಕಪ್ ಔಷಧೀಯ ಆಲ್ಕೋಹಾಲ್
10 ಆಸ್ಪಿರಿನ್ ಮಾತ್ರೆಗಳು
1 ಚಮಚ ಅರಿಶಿನ ಪುಡಿ
ಮನೆ ಮದ್ದು ಮಾಡುವ ವಿಧಾನ :
ಮೊದಲು ಒಂದು ಪ್ಲಾಸ್ಟಿಕ್ ಬಟ್ಟಲಿನಲ್ಲಿ ಆಲ್ಕೋಹಾಲ್ ಹಾಕಿ, ಅದಕ್ಕೆ ಅರಿಶಿನದ ಪುಡಿಯನ್ನು ಬೆರೆಸಿ ಮಿಕ್ಸ್ ಮಾಡಿ. ನಂತ್ರ ಆಸ್ಪಿರಿನ್ ಮಾತ್ರೆಯನ್ನು ಪುಡಿ ಮಾಡಿ ಈ ಮಿಶ್ರಣಕ್ಕೆ ಹಾಕಿ.
ಈ ಮಿಶ್ರಣವನ್ನು 24 ಗಂಟೆಯವರೆಗೆ ಮುಚ್ಚಿಡಿ. ನಂತ್ರ ಪ್ರತಿದಿನ ರಾತ್ರಿ ಪಾದಕ್ಕೆ ಈ ಮಿಶ್ರಣವನ್ನು ಹಚ್ಚಿ, ಪಾದವನ್ನು ಕವರ್ ಮಾಡಿಕೊಳ್ಳಿ. ಬೆಳಿಗ್ಗೆ ಎದ್ದ ತಕ್ಷಣ ಸ್ವಚ್ಛವಾಗಿ ತೊಳೆದು ಕ್ರೀಂ ಹಚ್ಚಿಕೊಳ್ಳಿ. ಕೆಲ ದಿನ ಹೀಗೆ ಮಾಡಿದ್ರೆ ನಿಮಗೆ ಪರಿಣಾಮ ತಿಳಿಯುತ್ತದೆ.