ಆಸ್ಕರ್ ಪ್ರಶಸ್ತಿ ಎಂಬುದು ಪ್ರತಿಯೊಬ್ಬ ಕಲಾವಿದನಿಗೆ ವಿಶೇಷವಾದದ್ದು. ಅಭಿನಯದ ವೃತ್ತಿ ಜೀವನದಲ್ಲಿ ಆಸ್ಕರ್ ಪ್ರಶಸ್ತಿ ಪಡೆಯಬೇಕೆಂಬುದು ಹಲವರ ಕನಸಾಗಿರುತ್ತದೆ. ಒಮ್ಮೆ ಆಸ್ಕರ್ ಪ್ರಶಸ್ತಿ ಸ್ವೀಕರಿಸಿದರೆ ಅದನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡು ಅದಕ್ಕೊಂದು ವಿಶೇಷ ಜಾಗ/ ಸ್ಥಾನ ನೀಡಿರುತ್ತಾರೆ. ಆದರೆ ಹಾಲಿವುಡ್ ತಾರೆಯೊಬ್ಬರು ತಮ್ಮ ಆಸ್ಕರ್ ಪ್ರಶಸ್ತಿಯನ್ನು ಮನೆಬಾಗಿಲ ಬಳಿ ಇಟ್ಟಿರೋದು ಹಲವರು ಟೀಕಿಸಲು ಕಾರಣವಾಗಿದೆ.
ನಟಿ ಗ್ವಿನೆತ್ ಪಾಲ್ಟ್ರೋ ಅವರು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ತನ್ನ ನಿವಾಸದ ಬಾಗಿಲ ಬಳಿ ಇಟ್ಟಿರೋದು ಕೆಂಗಣ್ಣಿಗೆ ಗುರಿಯಾಗಿದೆ. ಪ್ರತಿಷ್ಠಿತ ವೋಗ್ ಮಾಸ ಪತ್ರಿಕೆಗೆ ಸಂದರ್ಶನ ನೀಡುವ ವೇಳೆ ಆಸ್ಕರ್ ಪ್ರಶಸ್ತಿಯನ್ನು ತಮ್ಮ ಮನೆಯ ಡೋರ್ ಸ್ಟಾಪ್ ಆಗಿ ಬಳಸುತ್ತಿರುವುದಾಗಿ ಹೇಳಿದ್ದು ಈ ವಿಡಿಯೋ ವೈರಲ್ ಆದ ಬಳಿಕ ನಟಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಈ ವಿಡಿಯೋ ನೋಡಿದ ಹಲವರು ಈಕೆ ಆಸ್ಕರ್ ಪ್ರಶಸ್ತಿಗೆ ಅರ್ಹಳಲ್ಲ ಎಂದು ಟೀಕಿಸಿದ್ದಾರೆ. ಹಲವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶದ ನಂತರ ಗ್ವಿನೆತ್ ಪಾಲ್ಟ್ರೋ ಸ್ಪಷ್ಟೀಕರಣವನ್ನು ನೀಡಿ ಇದು ಕೇವಲ ತಮಾಷೆ ಎಂದರು.
ಗ್ವಿನೆತ್ ಪಾಲ್ಟ್ರೋ 1998 ರಲ್ಲಿ ಜಾನ್ ಮ್ಯಾಡೆನ್ ನಿರ್ದೇಶಿಸಿದ ಷೇಕ್ಸ್ ಪಿಯರ್ ಇನ್ ಲವ್ ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿದ್ದರು.