ಸುದೀರ್ಘ ಹಾದಿ ಹಿಡಿದು ಆಫೀಸಿಗೆ ಹೋಗುವುದು, ಟ್ರಾಫಿಕ್, ಡೆಡ್ಲೈನ್‌ಗಳು, ಭಾರೀ ಕೆಲಸದ ಒತ್ತಡಗಳು, ಸಹೋದ್ಯೋಗಿಗಳ ಕಿರಿಕಿರಿ, ಬಾಸ್‌ನ ವರ್ತನೆಗಳು……ಕೆಲಸಗಾರನ ಕೆಲಸದ ವಾತಾವರಣವನ್ನು ಹಾಳು ಮಾಡಬಲ್ಲ ಅನೇಕ ಫ್ಯಾಕ್ಟರ್‌ಗಳನ್ನು ದಿನಂಪ್ರತಿ ಕಾಣುತ್ತಲೇ ಇರುತ್ತೇವೆ.
ಆದರೆ, ಕೆಲವೊಮ್ಮೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಫ್ಲರ್ಟ್ ಮಾಡುವಂಥ ಕೆಲಸಗಳ ಮೂಲಕ ಈ ಒತ್ತಡವನ್ನು ಕೊಂಚ ಮಟ್ಟಿಗೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.
ಕೆಲಸ ಮಾಡುವ ಡೆಸ್ಕ್‌ಗಳ ಬಳಿ ಒಂದೊಂದು ಪುಟ್ಟ ಸಸಿಗಳನ್ನು ಇಟ್ಟುಕೊಂಡು, ನಿರಂತರ ಕೆಲಸದ ನಡುವೆ ಕೆಲವು ನಿಮಿಷಗಳ ಬ್ರೇಕ್ ತೆಗೆದುಕೊಂಡು, ಆಗಾಗ ಅವುಗಳನ್ನು ನೀರುಣಿಸಿ ಆರೈಕೆ ಮಾಡುತ್ತಾ ಇದ್ದಲ್ಲಿ ಒತ್ತಡ ಗಣನೀಯವಾಗಿ ತಗ್ಗುವುದು ಎಂದು ತಂಡವೊಂದು ಸಂಶೋಧನೆ ಮಾಡಿ ಅದರ ಅಧ್ಯಯನ ತಿಳಿಸಿದೆ.
24-58 ವರ್ಷಗಳ ವಯಸ್ಸಿನ ವಿವಿಧ ಹಂತಗಳ ವಯೋಮಾನದ ಮಂದಿಯನ್ನು ನಾಲ್ಕು ವಾರಗಳ ಮಟ್ಟಿಗೆ ಅಧ್ಯಯನಕ್ಕೊಳಪಡಿಸಲಾಗಿತ್ತು.
ಕೆಲಸ ತೀರಾ ಬೋರ್ ಆಗುತ್ತಿದೆ ಎನ್ನುವಾಗ 3 ನಿಮಿಷಗಳ ಬ್ರೇಕ್ ತೆಗೆದುಕೊಂಡು, ಆ ಸಮಯದಲ್ಲಿ ತಮ್ಮ ಡೆಸ್ಕ್‌ನಲ್ಲಿರುವ ಗಿಡಗಳಿಗೆ ನೀರು ಹಾಕಲು ಉತ್ತೇಜನ ನೀಡಲಾಗಿತ್ತು.