ಭಾರತದಲ್ಲಿ ಬೈಕ್ ಕ್ರೇಝ್ ಸಾಕಷ್ಟಿದೆ. ದಿನದಿಂದ ದಿನಕ್ಕೆ ಬೈಕ್‌ಗಳ ಮಾರಾಟದಲ್ಲೂ ಏರಿಕೆ ಆಗ್ತಿದೆ. ಮಾರ್ಚ್ ತಿಂಗಳಲ್ಲಿ ಹೀರೋ MotoCorp ಭರ್ಜರಿ ಸೇಲ್ಸ್ ಮಾಡಿದೆ. ಕಂಪನಿಯ ಕೆಲವು ಮಾದರಿಗಳ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಶೇಷವೆಂದರೆ ಈಗಲೂ ಹೀರೋ ಕಂಪನಿಯ ಅತಿ ಹೆಚ್ಚು ಮಾರಾಟವಾಗುವ ಬೈಕ್ ಅಂದ್ರೆ ಸ್ಪ್ಲೆಂಡರ್.
ಭಾರತೀಯ ಮಾರುಕಟ್ಟೆಯಲ್ಲಿ ಸ್ಪ್ಲೆಂಡರ್‌ನ ಪ್ರಾಬಲ್ಯ ಮುಂದುವರೆದಿದೆ. ಮಾರ್ಚ್ ತಿಂಗಳ ಸೇಲ್ಸ್‌ನಲ್ಲಿ ಸ್ಪ್ಲೆಂಡರ್ ನಂಬರ್-1 ಸ್ಥಾನದಲ್ಲಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಪ್ಲೆಂಡರ್ ಮಾರಾಟದಲ್ಲಿ ಕೊಂಚ ಇಳಿಕೆಯಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಭಾರತದಲ್ಲಿ 2,86,138 ಯುನಿಟ್‌ಗಳು ಮಾರಾಟವಾಗಿವೆ.
ಸ್ಪ್ಲೆಂಡರ್ ನಂತರ ಎಚ್‌ಎಫ್ ಡಿಲಕ್ಸ್ 83,947 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ. ಈ ಬೈಕ್‌ನ ಮಾರಾಟ ಕೂಡ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಡಿಮೆಯಾಗಿದೆ. ಆದರೂ HF ಡಿಲಕ್ಸ್ ಪ್ರಯಾಣಿಕರ ಫೇವರಿಟ್. ಮಾರ್ಚ್ 2024ರ ಮಾರಾಟದ ಅಂಕಿಅಂಶಗಳಲ್ಲಿನ ವಿಶೇಷತೆಯೆಂದರೆ ಪ್ಯಾಶನ್ ಮೋಟಾರ್‌ಸೈಕಲ್. ಕಳೆದ ವರ್ಷಕ್ಕೆ ಹೋಲಿಸಿದರೆ ಅದರ ಮಾರಾಟದಲ್ಲಿ ಶೇ.439.87ರಷ್ಟು ಏರಿಕೆಯಾಗಿದೆ. ಪ್ಯಾಶನ್ 22,491 ಯುನಿಟ್‌ಗಳ ಮಾರಾಟದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಗ್ಲಾಮರ್ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಡೆಸ್ಟಿನಿ 125 (ಸ್ಕೂಟರ್) ಐದನೇ ಸ್ಥಾನದಲ್ಲಿದೆ. ಕ್ರಮವಾಗಿ 17,026 ಮತ್ತು 14,143 ಯುನಿಟ್‌ಗಳು ಮಾರಾಟವಾಗಿವೆ. ಎರಡೂ ಸ್ಕೂಟರ್‌ಗಳ ಮಾರಾಟದಲ್ಲಿ ಎರಡಂಕಿಯ ಬೆಳವಣಿಗೆ ಕಂಡುಬಂದಿದೆ.
Hero MotoCorpನ ಹೊಸ ಮಾದರಿಗಳಾದ Xtreme 125R ಮತ್ತು Xtreme 160/200 ಗ್ರಾಹಕರ ಗಮನ ಸೆಳೆದಿವೆ. ಕ್ರಮವಾಗಿ 12,010 ಮತ್ತು 2,937 ಯುನಿಟ್‌ಗಳು ಮಾರಾಟವಾಗಿವೆ. ಈ ಮಾದರಿಗಳು ಶಕ್ತಿಯುತ ಬೈಕ್‌ಗಾಗಿ ಹುಡುಕುತ್ತಿರುವ ಗ್ರಾಹಕರನ್ನು ಆಕರ್ಷಿಸುತ್ತವೆ. ಆದಾಗ್ಯೂ Xpulse 200 ಮತ್ತು Maestro ಮಾರಾಟವು ಕ್ರಮವಾಗಿ 78.21 ಪ್ರತಿಶತ ಮತ್ತು 92.50 ಪ್ರತಿಶತದಷ್ಟು ಕುಸಿದಿದೆ.