ಬ್ಯುಸಿ ಲೈಫ್‌ನಲ್ಲಿ ಆಯಾಸವಾಗುವುದು ಅತ್ಯಂತ ಸಾಮಾನ್ಯ ಸಂಗತಿ. ಆದರೆ ಯಾವುದೇ ಕಾರಣವಿಲ್ಲದೆ ನಿರಂತರ ಆಯಾಸ ಮತ್ತು ತೂಕ ಹೆಚ್ಚಾಗುವುದು ಗಂಭೀರ ಕಾಯಿಲೆಯ ಸಂಕೇತವೂ ಇರಬಹುದು. ತೂಕ ಕೂಡ ವೇಗವಾಗಿ ಹೆಚ್ಚಾಗುತ್ತಿದ್ದರೆ, ಮೊದಲಿಗಿಂತ ಹೆಚ್ಚು ಆಯಾಸವನ್ನು ಅನುಭವಿಸುತ್ತಿದ್ದರೆ ಕೂಡಲೇ ಜಾಗರೂಕರಾಗಿ. ಇವು ಥೈರಾಯ್ಡ್‌ನಂತಹ ಗಂಭೀರ ಸಮಸ್ಯೆಯ ಲಕ್ಷಣಗಳಾಗಿರಬಹುದು.
ಥೈರಾಯ್ಡ್ ಒಂದು ಪ್ರಮುಖ ಹಾರ್ಮೋನ್ ಗ್ರಂಥಿ. ಅದರಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ದೇಹದ ಅನೇಕ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಥೈರಾಯ್ಡ್‌ನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ – ಹೈಪರ್ ಥೈರಾಯ್ಡ್ ಮತ್ತು ಹೈಪೋಥೈರಾಯ್ಡ್. ಈ ಎರಡೂ ಪರಿಸ್ಥಿತಿಗಳಲ್ಲಿ ಥೈರಾಯ್ಡ್ ಗ್ರಂಥಿಯು ದೇಹಕ್ಕೆ ಅಗತ್ಯವಿರುವಷ್ಟು ಹಾರ್ಮೋನ್ ಅನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಆದರೆ ಆಹಾರದಲ್ಲಿನ ಕೆಲವು ಬದಲಾವಣೆಗಳು ಮತ್ತು ಗಿಡಮೂಲಿಕೆಗಳ ಸಹಾಯದಿಂದ ಥೈರಾಯ್ಡ್ ಸಮಸ್ಯೆಯನ್ನು ನಿವಾರಿಸಬಹುದು.
ಕಪ್ಪು ಜೀರಿಗೆ – ಕಪ್ಪು ಜೀರಿಗೆ ಥೈರಾಯ್ಡ್ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕಪ್ಪು ಜೀರಿಗೆಯಲ್ಲಿರುವ ಅಂಶಗಳು ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಅಧ್ಯಯನದ ಪ್ರಕಾರ 22 ರಿಂದ 50 ವರ್ಷ ವಯಸ್ಸಿನ ಜನರು 8 ವಾರಗಳ ಕಾಲ ಕಪ್ಪು ಜೀರಿಗೆ ಸೇವಿಸಿದರು. ಇದು ಅವರ ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಸುಧಾರಿಸಿತು. ಜೊತೆಗೆ ದೇಹದ ತೂಕವೂ ಕಡಿಮೆಯಾಗಿತ್ತು. ಕಪ್ಪು ಜೀರಿಗೆಯನ್ನು ಚಹಾ, ಸೂಪ್ ಅಥವಾ ಸಲಾಡ್ ರೂಪದಲ್ಲಿ ತೆಗೆದುಕೊಳ್ಳಿ. ಇದು ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ತುಳಸಿ – ತುಳಸಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಗುಣಗಳನ್ನು ಹೊಂದಿದೆ. ಇದರಲ್ಲಿ ಆ್ಯಂಟಿ ಫಂಗಲ್ ಮತ್ತು ಉರಿಯೂತ ನಿವಾರಕ ಗುಣಗಳು ಕಂಡುಬರುತ್ತವೆ. ಈ ಗುಣಲಕ್ಷಣಗಳು ಥೈರಾಯ್ಡ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ಅಥವಾ ಅಗಿಯುವುದು ಥೈರಾಯ್ಡ್ ಸಂಬಂಧಿತ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಅಶ್ವಗಂಧ – ಹಾರ್ಮೋನ್ಗಳ ಸಮತೋಲನ ಸುಧಾರಿಸುವಲ್ಲಿ ಅಶ್ವಗಂಧ ಕೂಡ ಪರಿಣಾಮಕಾರಿಯಾಗಿದೆ. ಅಶ್ವಗಂಧದ ಪುಡಿಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಹಾರ್ಮೋನುಗಳ ಸಮತೋಲನವನ್ನು ಸುಧಾರಿಸಬಹುದು. ಎಂಟಿಒಕ್ಸಿಡೆಂಟ್ ಗುಣಲಕ್ಷಣಗಳು ಅಶ್ವಗಂಧದಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ಹಾನಿಕಾರಕವಾದ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.