ದಿನವಿಡೀ ಉತ್ಸಾಹದಿಂದಿರುವಂತೆ ಮಾಡುವ ಈ ಪೇಯದ ಬಗ್ಗೆ ನಿಮಗೆ ನಾವು ಹೇಳ್ತೇವೆ ನೀವೂ ಒಮ್ಮೆ ಮಾಡಿ ನೋಡಿ. ಬಾದಾಮಿ, ಗಸಗಸೆ ಮತ್ತು ಗುಲಾಬಿ ಎಲೆಗಳಿಂದ ಮಾಡಿದ ಪಾನೀಯ ಆರೋಗ್ಯಕ್ಕೆ ಒಳ್ಳೆಯದು. ಆಮ್ಲೀಯತೆ, ಹೊಟ್ಟೆಯ ಕಿರಿಕಿರಿ, ಅಜೀರ್ಣ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ, ಇದು ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಇದಕ್ಕೆ ಗಸಗಸೆ (1 ಟೀಸ್ಪೂನ್), ಕರ್ಬೂಜದ ಬೀಜಗಳು (1 ಟೀಸ್ಪೂನ್), ಸೂರ್ಯಕಾಂತಿ ಬೀಜಗಳು (1 ಟೀಸ್ಪೂನ್), ಸೋಂಪ್ (2 ಟೀಸ್ಪೂನ್), ಕರಿಮೆಣಸು (2-3 ), ಜಾಯಿಕಾಯಿ ಪುಡಿ (1 ಟೀಸ್ಪೂನ್) ), ಏಲಕ್ಕಿ ಪುಡಿ (1/4 ಟೀಸ್ಪೂನ್), ಪಿಸ್ತಾ ಪುಡಿ (2-3 ಟೀಸ್ಪೂನ್), ಹಾಲು ( ಅರ್ಥ ಲೀಟರ್), ಕೇಸರಿ ( ಸ್ವಲ್ಪ), ರುಚಿಗೆ ತಕ್ಕಷ್ಟು ಜೇನು ತುಪ್ಪ.
ಮಾಡುವ ವಿಧಾನ : ಜೇನು ಬಿಟ್ಟು ಎಲ್ಲ ವಸ್ತುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನಂತ್ರ ಹಾಲಿಗೆ ಇದನ್ನು ಹಾಕಿ ಚೆನ್ನಾಗಿ ಕುದಿಸಿ. ಮಿಶ್ರಣ ಗಂಟಾಗದಂತೆ ನೋಡಿಕೊಳ್ಳಿ. ಮಿಶ್ರಣ ಸ್ವಲ್ಪ ದಪ್ಪವಾದ್ಮೇಲೆ ಗ್ಯಾಸ್ ಬಂದ್ ಮಾಡಿ. ಮಿಶ್ರಣ ತಣ್ಣಗಾಗುವವರೆಗೆ ಬಿಡಿ. ನಂತ್ರ ಜೇನು ತುಪ್ಪ ಸೇರಿಸಿ ಸೇವಿಸಿ.