
ವೇಗವಾಗಿ ನಡೆಯುವುದು ಒಂದು ಉತ್ತಮ ವ್ಯಾಯಾಮ. ಅದರಲ್ಲೂ 40 ನಿಮಿಷಗಳ ಕಾಲ ವೇಗವಾಗಿ ನಡೆಯುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.
ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ 40 ನಿಮಿಷಗಳ ಕಾಲ ಬ್ರಿಸ್ಕ್ ವಾಕಿಂಗ್ ಮಾಡಿದಲ್ಲಿ ಹೃದಯಕ್ಕೆ ಒಳ್ಳೆಯದು ಎಂದು ಹೊಸ ಸಂಶೋಧನೆ ಹೇಳುತ್ತದೆ. ಇದರಿಂದ ಹೃದಯ ಆರೋಗ್ಯ ಚೆನ್ನಾಗಿರುವ ಜೊತೆಗೆ, ಹೃದಯ ಸ್ಥಂಭನವನ್ನು ತಡೆಯುವಲ್ಲಿ ಸಹಕಾರಿ. ಜೊತೆಗೆ ಹೃದಯದ ಖಾಯಿಲೆಯಿಂದಲೂ ನಮ್ಮನ್ನು ದೂರವಿಡುತ್ತದೆ.
ನಿಧಾನವಾಗಿ ವಾಕಿಂಗ್ ಮಾಡುವುದಕ್ಕಿಂತಲೂ ವೇಗವಾಗಿ ವಾಕ್ ಮಾಡುವುದು ಆರೋಗ್ಯಕ್ಕೆ ಉತ್ತಮ. ಇದರಿಂದ ಆಸ್ಪತ್ರೆಗೆ ಸೇರುವವರ ಪ್ರಮಾಣ ಕಡಿಮೆಯಾಗುತ್ತದೆ ಎನ್ನುತ್ತಾರೆ ಸಂಶೋಧಕರು.