ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದರೆ ಎಷ್ಟೆಲ್ಲಾ ಸಮಸ್ಯೆಗಳಿವೆಯೋ ಅದಕ್ಕೂ ಹೆಚ್ಚಿನ ಸಮಸ್ಯೆ ಸಕ್ಕರೆ ಪ್ರಮಾಣ ಕಡಿಮೆಯಾಗುವುದರಲ್ಲೂ ಇದೆ ಎಂಬುದು ನಿಮಗೆ ಗೊತ್ತೇ?
ದೇಹದ ಎಲ್ಲಾ ಜೀವಕೋಶಗಳು ಸರಿಯಾಗಿ ಕೆಲಸ ನಿರ್ವಹಿಸಲು ಗ್ಲುಕೋಸ್ ಪ್ರಮಾಣ ಬಹಳ ಮುಖ್ಯ. ಇದು ಕಡಿಮೆಯಾದರೆ ಒಂದೊಂದೇ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುವ ಅಪಾಯವಿದೆ.
ಸಾಮಾನ್ಯವಾಗಿ ಸಕ್ಕರೆ ಅಂಶ ಕಡಿಮೆಯಾಗುವಾಗ ದೃಷ್ಟಿದೋಷ, ಹೃದಯದ ಬಡಿತ ಹೆಚ್ಚುವ ಲಕ್ಷಣಗಳು ಕಂಡುಬರುತ್ತವೆ. ಕೆಲಸ ಮಾಡದಿದ್ದರೂ ಆಯಾಸ ಎನಿಸುತ್ತದೆ. ದಿಢೀರ್ ಹಸಿವು, ತಲೆಸುತ್ತುವಿಕೆ, ಬೆವರು ಮೊದಲಾದವುಗಳೊಂದಿಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವವೂ ಇದೆ.
ಹೀಗಾಗದಂತೆ ತಡೆಯಲು ಮಧುಮೇಹಿಗಳು ನಿಯಮಿತವಾಗಿ ಸಕ್ಕರೆ ಮಟ್ಟವನ್ನು ಪರೀಕ್ಷಿಸುತ್ತಿರಿ. ಚಾಕೊಲೇಟ್ ಸದಾ ನಿಮ್ಮ ಬ್ಯಾಗ್ ನಲ್ಲಿರಲಿ. ನಿಮಗೆ ಇದರ ಲಕ್ಷಣ ಕಾಣಿಸಿಕೊಳ್ಳುತ್ತಿದೆ ಎಂದಾಕ್ಷಣ ಚಾಕೊಲೇಟ್ ಸವಿಯಿರಿ.