alex Certify ಬೆಲ್ಲದ ಅತಿಯಾದ ಸೇವನೆಯಿಂದ ಕಾಡುತ್ತೆ ಈ ಆರೋಗ್ಯ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲ್ಲದ ಅತಿಯಾದ ಸೇವನೆಯಿಂದ ಕಾಡುತ್ತೆ ಈ ಆರೋಗ್ಯ ಸಮಸ್ಯೆ

ಚಳಿಗಾಲದಲ್ಲಿ ದೇಹವು ಆರೋಗ್ಯವಾಗಿರಲು ಬೆಲ್ಲವನ್ನು ಬಳಸುತ್ತಾರೆ. ಇದು ದೇಹಕ್ಕೆ ಶಕ್ತಿಯನ್ನು ಕೊಡುವುದರ ಜೊತೆಗೆ ಹಲವು ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಅದಕ್ಕಾಗಿ ನೀವು ಬೆಲ್ಲವನ್ನು ಅತಿಯಾಗಿ ಸೇವಸಿದರೆ ಈ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

*ಬೆಲ್ಲದಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ ಮಧುಮೇಹ ಸಮಸ್ಯೆಗೆ ಕಾರಣವಾಗಬಹುದು.

*ಅತಿಯಾಗಿ ಬೆಲ್ಲ ಸೇವಿಸಿದ್ರೆ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಅಜೀರ್ಣ ಮತ್ತು ಹೊಟ್ಟೆಯ ತೊಂದರೆ ಎದುರಿಸಬೇಕಾಗುತ್ತದೆ.

*ಬೆಲ್ಲ ಉಷ್ಣದಿಂದ ಕೂಡಿರುವುದರಿಂದ ಇದನ್ನು ಅತಿಯಾಗಿ ಸೇವಿಸಿದರೆ ಮೂಗಿನಲ್ಲಿ ರಕ್ತಸ್ರಾವವಾಗಬಹುದು. ಮುಖದಲ್ಲಿ ಮೊಡವೆ, ಚರ್ಮದ ಅಲರ್ಜಿ ಉಂಟಾಗಬಹುದು.

*ಬೆಲ್ಲ ತುಂಬಾ ಸಿಹಿಯಾಗಿರುವುದರಿಂದ ಇದನ್ನು ಅತಿಯಾಗಿ ಸೇವಿಸಿದರೆ ಹೊಟ್ಟೆಯಲ್ಲಿ ಹುಳಗಳು ಉಂಟಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಇನ್ ಫೆಕ್ಷನ್ ಆಗಬಹುದು. ಹಾಗೇ ಇದು ಸ್ವಚ್ಚವಾಗಿ ತಯಾರಿಸದಿದ್ದರೆ ಅದರಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು.

*ಬೆಲ್ಲದಿಂದ ತೂಕವನ್ನು ಇಳಿಸಿಕೊಳ್ಳಬಹುದು. ಆದರೆ ಇದನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...