ಅನೇಕ ಔಷಧೀಯ ಗುಣಗಳಿರುವ ತುಳಸಿ ಎಲೆಯನ್ನು ಆಹಾರ ರೂಪದಲ್ಲಿ ಸೇವಿಸಿದರೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಇದರ ಎಲೆಯನ್ನು ಹಾಗೆಯೇ ತಿನ್ನಲು ಇಷ್ಟವಾಗದಿದ್ದರೆ, ಚಹಾ, ಪಾನಕ ಮುಂತಾದ ರೂಪದಲ್ಲಿ ಸೇವಿಸಬಹುದು. ಈ ಎಲೆಯ ಆರೋಗ್ಯ ಲಾಭಗಳನ್ನು ಪಡೆಯುವ ಅತ್ಯಂತ ಸುಲಭ ವಿಧಾನವೆಂದರೆ ತುಳಸಿ ಎಲೆಯನ್ನು ಚಹಾದೊಡನೆ ಸೇವಿಸುವುದು.
ಬೆಳಗ್ಗೆ ಮಾಡುವ ಚಹಾಗೆ ತುಳಸಿಯ ತಾಜಾ ಎಲೆಗಳನ್ನು ಹಾಕಿ ಬಿಸಿ ಬಿಸಿಯಾಗಿ ಕುಡಿದರೆ ನೆಗಡಿ ಮತ್ತು ಕಟ್ಟಿದ ಮೂಗು ಸರಾಗವಾಗುತ್ತದೆ. ತುಳಸಿಯ ಪಾನಕ ಮಾಡಿಯೂ ಕುಡಿಯಬಹುದು.
ವಿಶಿಷ್ಟ ರುಚಿಯ ತುಳಸಿ ಪಾನೀಯವನ್ನು ಚಿಲ್ ಮಾಡಿಯೂ ಸೇವಿಸಬಹುದು. ಇತರ ಹಣ್ಣಿನ ಜ್ಯೂಸ್‌ಗಳಿಗೆ ಇದರ ಎಲೆಯನ್ನು ಬೆರೆಸಿ ಕುಡಿಯಬಹುದು. ಕ್ಯಾಲ್ಷಿಯಂ, ಕಬ್ಬಿಣ, ಮೆಗ್ನೇಷಿಯಂ ಮುಂತಾದ ಪೋಷಕಾಂಶಗಳಿರುವ ತುಳಸಿಯನ್ನು ಅನ್ನಕ್ಕೂ ಬೆರೆಸಿ ತಿನ್ನಬಹುದು. ಸಲಾಡ್‌ಗೆ ಸೇರಿಸಿ, ಟಾಪಿಂಗ್ ರೂಪದಲ್ಲಿ, ಜೇನುತುಪ್ಪದ ಜೊತೆ ತಿಂದರೂ ಟೇಸ್ಟಿಯಾಗಿರುತ್ತದೆ.