ಹರಳು ಅಥವಾ ಔಡಲ ತನ್ನ ಬೀಜದಲ್ಲಿರುವ ಎಣ್ಣೆಯಿಂದಾಗಿ ಬಹಳ ಉಪಯುಕ್ತ ಬೆಳೆಯೆನಿಸಿದೆ. ಹಸಿಬೀಜಗಳಿಂದ ತೆಗೆದ ಎಣ್ಣೆ ಬಣ್ಣರಹಿತ ಅಥವಾ ನಸುಹಳದಿ ಬಣ್ಣದ್ದಾಗಿರುತ್ತದೆ. ಇದರ ವಾಸನೆಯೂ ಕಡಿಮೆ. ಔಷಧಿ ರೂಪದಲ್ಲಿ ಹಸಿಬೀಜದ ಎಣ್ಣೆಯನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ, ಹರಳೆಣ್ಣೆಯ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯೋಣ.
* ಹರಳೆಣ್ಣೆಯನ್ನು ಕಣ್ಣಿಗೆ ಹಾಕುವುದರಿಂದ ಕಣ್ಣು ನೋವು ದೂರವಾಗುತ್ತದೆ.
* ಹರಳೆಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆನೋವು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು ಮತ್ತು ದೇಹದ ಉಷ್ಣತೆ ಕಡಿಮೆಯಾಗುತ್ತದೆ.
* ಹರಳೆಣ್ಣೆಯಲ್ಲಿ ಅಭ್ಯಂಗ ಸ್ನಾನ ಮಾಡಿದರೆ ವಾಯು ಕಾಯಿಲೆಗಳು ಗುಣವಾಗುತ್ತದೆ. ದೇಹದ ಆರೋಗ್ಯ ಸುಧಾರಿಸುತ್ತದೆ.
* ಬಿಸಿ ಹಾಲು ಅಥವಾ ಕಾಫಿಯೊಂದಿಗೆ ಅಥವಾ ಶುಂಠಿಯ ರಸದೊಂದಿಗೆ ಹರಳೆಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಮಲಬದ್ಧತೆ ದೂರವಾಗುತ್ತದೆ. ಮಲಬದ್ಧತೆಗೆ ಇದು ಒಂದು ಉತ್ತಮ ಔಷಧ.
* ಒಂದು ಚಮಚ ಹರಳೆಣ್ಣೆಗೆ 1 ಚಮಚ ಶುಂಠಿ ರಸ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಸೈಂಧವ ಲವಣ ಬೆರೆಸಿ ತೆಗೆದುಕೊಂಡರೆ ಮಂಡಿ ಮತ್ತು ಕೀಲುಗಳಲ್ಲಿ ಉರಿ ಕಡಿಮೆಯಾಗುತ್ತದೆ.