alex Certify ಕಲ್ಲುಸಕ್ಕರೆ ಸೇವನೆಯಿಂದ ಇದೆ ಈ ಆರೋಗ್ಯ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲ್ಲುಸಕ್ಕರೆ ಸೇವನೆಯಿಂದ ಇದೆ ಈ ಆರೋಗ್ಯ ಪ್ರಯೋಜನ

ಸಿಹಿಯಾದ ಕಲ್ಲುಸಕ್ಕರೆ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಇದರಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಹಾಗಾಗಿ ಇದು ದೇಹದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ.

*ನೀರು ಸರಿಯಾಗಿ ಸೇವನೆ ಮಾಡದಿದ್ದಾಗ ಬಾಯಿಯಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕಲ್ಲುಸಕ್ಕರೆಗೆ ಏಲಕ್ಕಿ ಪುಡಿಯ ಮಿಶ್ರಣವನ್ನು ಮಾಡಿ ಹುಣ್ಣಿನ ಮೇಲೆ ಹಚ್ಚಿದರೆ ಹುಣ್ಣು ನಿವಾರಣೆಯಾಗುತ್ತದೆ.

*ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ಸುಧಾರಿಸುತ್ತದೆ. ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಕಲ್ಲುಸಕ್ಕರೆಯ ಜೊತೆ ಸೋಂಪನ್ನು ಮಿಕ್ಸ್ ಮಾಡಿ ಸೇವಿಸಿ.

*ದೇಹದ ಉಷ್ಣತೆ ಹೆಚ್ಚಾಗಿ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಲ್ಲುಸಕ್ಕರೆಯನ್ನುನೀರಿನಲ್ಲಿ ಮಿಕ್ಸ್ ಮಾಡಿ ಸೇವಿಸಿ. ಇದು ತಂಪಾಗಿರುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ.

*ಮಕ್ಕಳಿಗೆ ಕೆಮ್ಮು, ನೆಗಡಿ ಸಮಸ್ಯೆ ಕಾಡುವುದು ಸಹಜ. ಈ ಸಮಸ್ಯೆಯನ್ನು ನಿವಾರಿಸಲು ಕಲ್ಲುಸಕ್ಕರೆಗೆ ಕರಿಮೆಣಸಿನ ಪುಡಿ ಮತ್ತು ತುಪ್ಪವನ್ನು ಮಿಕ್ಸ್ ಮಾಡಿ ತಿನ್ನಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...