
ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಅಲ್ಲದೇ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದರಲ್ಲಿರುವ ಪೋಷಕಾಂಶಗಳು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉದ್ದವಾದ, ಬಲವಾದ ಕೂದಲನ್ನು ಹೊಂದಲು ಸಹಾಯ ಮಾಡುತ್ತದೆ. ಹಾಗಾಗಿ ಕೂದಲಿನ ಆರೋಗ್ಯಕ್ಕಾಗಿ ಗ್ರೀನ್ ಟೀಯಿಂದ ತಯಾರಿಸಿದ ಹೇರ್ ಪ್ಯಾಕ್ ಗಳನ್ನು ಬಳಸಿ.
*1/2 ಕಪ್ ಬಿಸಿ ನೀರಿಗೆ ಗ್ರೀನ್ ಟೀ ಎಲೆಗಳನ್ನು ಸೇರಿಸಿ 5 ನಿಮಿಷ ಕುದಿಸಿ. ಈ ನೀರಿಗೆ ಸಾಸಿವೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪೇಸ್ಟ್ ನ್ನು ನೆತ್ತಿಗೆ ಹಚ್ಚಿ ಕೂದಲನ್ನು 15 ನಿಮಿಷಗಳ ಕಾಲ ಮಸಾಜ್ ಮಾಡಿ. 40 ನಿಮಿಷಗಳ ಕಾಲ ಹಾಗೆ ಬಿಟ್ಟು ಬಳಿಕ ವಾಶ್ ಮಾಡಿ, ಇದನ್ನು ವಾರಕ್ಕೊಮ್ಮೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.
*ಗ್ರೀನ್ ಟೀ ಪುಡಿಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಆಲಿವ್ ಆಯಿಲ್ 1 ಚಮಚ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ ಒದ್ದೆ ಕೂದಲಿಗೆ ಹಚ್ಚಿ. 15 ನಿಮಿಷಗಳ ಕಾಲ ಮಸಾಜ್ ಮಾಡಿ. 1 ಗಂಟೆಗಳ ಕಾಲ ಹಾಗೆ ಬಿಟ್ಟು ಬಳಿಕ ವಾಶ್ ಮಾಡಿ, ಇದನ್ನು ತಿಂಗಳಿಗೆ 2 ಬಾರಿ ಮಾಡಿ.