
ಗುರುಗ್ರಾಮದ ಕೆಫೆ ಒಂದರ ಹೊರಗೆ ಹನುಮಾನ್ ಚಾಲೀಸಾ ಪಠಣ ಮಾಡುತ್ತಿರುವ ಯುವಕರ ಗುಂಪೊಂದರ ವಿಡಿಯೋ ಟ್ವಿಟರ್‌ನಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ಇವನ್ನು ಕಂಡ ಅನೇಕ ದಾರಿಹೋಕರು ಬಂದು ಗುಂಪನ್ನು ಸೇರಿಕೊಂಡಿದ್ದಾರೆ.
ಸುದ್ದಿ ಸಂಸ್ಥೆಗಳ ಪ್ರಕಾರ, ಈ ಮಂತ್ರಪಠಣ ಮಾಡಲು ಕೆಲವು ಯುವಕರು ಇದೇ ಕೆಫೆ ಮುಂದೆ ಜಮಾಯಿಸುತ್ತಾರೆ. ಪ್ರತಿ ಮಂಗಳವಾರದಂದು ಈ ಗುಂಪು ಹೀಗೆ ಹನುಮಾನ್ ಚಾಲೀಸಾ ಪಠಣ ಮಾಡುತ್ತದೆ.
ಚೈತ್ರ ಮಾಸದ ಮಂಗಳವಾರವೊಂದರಲ್ಲಿ ಹನುಮಂತ ಕೇಸರಿ ಹಾಗೂ ಅಂಜನರಿಗೆ ಜನಿಸಿದ್ದು, ಭಕ್ತರು ಈ ದಿನಂದು ಹನುಮಂತನ ಆರಾಧನೆ ಮಾಡುತ್ತಾರೆ.
ಇದೀಗ ಈ ಸಮೂಹವು ಭಗವಾನ್ ಹನುಮಂತನಿಗೆ ತಮ್ಮ ಭಕ್ತಿಯನ್ನು ತೋರಲು ಹೊಸ ಮಾರ್ಗದೊಂದಿಗೆ ಬಂದಿದ್ದಾರೆ. ದೇವಸ್ಥಾನಕ್ಕೆ ಹೋಗುವ ಬದಲಿಗೆ, ಸ್ಥಳೀಯ ಕೆಫೆಯೊಂದರಲ್ಲಿ ಜಮಾಯಿಸಿ ಸಕಾರಾತ್ಮಕವಾದ ಆಧ್ಯಾತ್ಮಿಕ ಶಕ್ತಿ ಬರಲೆಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ಗುಂಪಿನಲ್ಲಿರುವ ಕೆಲವರು ಗಿಟಾರ್ ಹಾಗೂ ಢೋಲಕ್ ನುಡಿಸುವ ಮೂಲಕ ಹನುಮಾನ್ ಚಾಲೀಸಾಗೆ ಆಧುನಿಕ ಟ್ವಿಸ್ಟ್ ಸಹ ಕೊಟ್ಟಿದ್ದಾರೆ.
ದಾರಿಹೋಕರು ಈ ಸಮೂಹದ ಪ್ರದರ್ಶನವನ್ನು ಬೆರಗುಗಣ್ಣುಗಳಿಂದ ವೀಕ್ಷಿಸುವುದನ್ನು ಇದೇ ವೇಳೆ ಕ್ಯಾಮೆರ ಪ್ಯಾನ್ ಮಾಡಿ ಹಿಡಿಯಲಾಗಿದೆ.