ಪರಿಸರದ ಬಗ್ಗೆ ಸಾರ್ವಜನಿಕ ಹೊಣೆಗಾರಿಕೆಯ ಅರಿವು ಮೂಡಿಸಲು ಮಾದರಿಯಾಗಿರುವ ಹಾಸನ ಜಿಲ್ಲೆಯ 20 ವರ್ಷ ವಯಸ್ಸಿನ ಈ ವಿದ್ಯಾರ್ಥಿ ತನ್ನೂರು ಗೂಡೇನಹಳ್ಳಿಯಲ್ಲಿ 5000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾನೆ.
ಮೊದಲ ವರ್ಷ ಬಿಎ ವಿದ್ಯಾರ್ಥಿ ಗಿರೀಶ್ ಕೆ.ಆರ್. ತನ್ನ 12ನೇ ವಯಸ್ಸಿನಲ್ಲೇ ತನ್ನ ಪರಿಸರ ಕಾಳಜಿಯ ಕೆಲಸ ಶರುವಿಟ್ಟುಕೊಂಡಿದ್ದಾನೆ. ದಿನಗೂಲಿ ನೌಕರರಾದ ರಮೇಶ್ ಮತ್ತು ಲತಾ ದಂಪತಿಗಳ ಪುತ್ರನಾದ ಗಿರೀಶ್ ಆರ್ಥಿಕ ಸವಾಲುಗಳ ನಡುವೆಯೇ ಪರಿಸರ ಕಾಳಜಿಯಲ್ಲಿ ಶ್ರೀಮಂತಿಕೆಯನ್ನೇ ಮೆರೆಯುತ್ತಿದ್ದಾನೆ.
ಡೇಟಾ ಪೋರ್ಟಬಿಲಿಟಿಯನ್ನು ಮತ್ತಷ್ಟು ಸರಳಗೊಳಿಸಿದ ಫೇಸ್ಬುಕ್
“ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಬೇರೆಯವರನ್ನು ಬೈಯುವುದರಲ್ಲಿ ಯಾವುದೇ ಅರ್ಥವಿಲ್ಲ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ನಾನು ನನ್ನ ಕೆಲಸ ಮಾಡುವುದನ್ನು ಮುಂದುವರೆಸುತ್ತೇನೆ. ನನ್ನ ಸ್ನೇಹಿತರು, ಶಿಕ್ಷಕರು ಹಾಗೂ ನನ್ನ ಹೆತ್ತವರು ಈ ವಿಚಾರದಲ್ಲಿ ನಿಜಕ್ಕೂ ಬಹಳ ನೆರವಾಗಿದ್ದಾರೆ” ಎಂದು ಗಿರೀಶ್ ತಿಳಿಸಿದ್ದಾನೆ.
ಸ್ವಾಮಿ ವಿವೇಕಾನಂದರ 156ನೇ ಜನ್ಮದಿನೋತ್ಸವದ ಅಂಗವಾಗಿ 450 ಕಿಮೀ ಸೈಕ್ಲಿಂಗ್ ಅಭಿಯಾನ ಇಟ್ಟುಕೊಂಡಿದ್ದ ಗಿರೀಶ್, ಪರಿಸರ ಸಂರಕ್ಷಣೆ, ಮಳೆ ನೀರು ಕೊಯ್ಲು ಹಾಗೂ ಕೊಳಗಳ ಸಂರಕ್ಷಣೆ ಕುರಿತಂತೆ ಜಾಗೃತಿ ಮೂಡಿಸುತ್ತಾ ಸಾಗಿದ್ದಾನೆ.