ತೂಕ ಇಳಿಸುವುದು ಸುಲಭವಲ್ಲ. ತೂಕ ಇಳಿಸಲು ಜನರು ಸಾಕಷ್ಟು ಪ್ರಯತ್ನ ನಡೆಸ್ತಾರೆ. ಕೆಲವರು ಡಯಟ್ ಕ್ರಮ ಅನುಸರಿಸಿದರೆ ಇನ್ನು ಕೆಲವರು ಯೋಗ, ವ್ಯಾಯಾಮ ಮಾಡ್ತಾರೆ. ಇಷ್ಟೆಲ್ಲ ಮಾಡಿದ್ರೂ ತೂಕ ಇಳಿಯೋದು ಕಷ್ಟ.
ತೂಕ ಇಳಿಸಲು ಪ್ರಯತ್ನಿಸುತ್ತಿರುವವರು, ಕೆಲವು ಧಾನ್ಯಗಳನ್ನು ಸೇವಿಸಿ ತೂಕವನ್ನು ಇಳಿಸಬೇಕು.
ಜೋಳ, ತೂಕ ಇಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಬಿ, ಮ್ಯಾಗ್ನೇಶಿಯಂ, ಫ್ಲೆವೊನೈಡ್, ಫೆನೊಲಿಕ್ ಎಸಿಡ್ ಮತ್ತು ಟ್ಯಾನನ್ ಮುಂತಾದ ಪೋಷಕ ಸತ್ವಗಳು ತೂಕವನ್ನು ಬೇಗ ಇಳಿಸುತ್ತದೆ.
ನವಣೆಯ ಸೇವನೆಯಿಂದ ತೂಕ ಕಡಿಮೆಯಾಗುತ್ತದೆ. ಇದು ಅನೇಕ ರೋಗಗಳನ್ನು ಶಮನಗೊಳಿಸುತ್ತದೆ. ಇದರಲ್ಲಿ ಪ್ರೊಟೀನ್, ಫೈಬರ್, ಐರನ್ ಮತ್ತು ಕ್ಯಾಲ್ಸಿಯಮ್ ಮುಂತಾದ ಪೌಷ್ಠಿಕ ಗುಣವಿದೆ.
ರಾಗಿಯನ್ನು ಡಯಟ್ ನಲ್ಲಿ ಅಳವಡಿಸಿಕೊಳ್ಳಬಹುದು. ಇದರಲ್ಲಿ ಫೈಬರ್ ಅಂಶ ಹೆಚ್ಚಿಗೆ ಇರುವುದರಿಂದ ಇದನ್ನು ತಿಂದಾಗ ಹೊಟ್ಟೆ ತುಂಬುವುದಿಲ್ಲ. ರಾಗಿ ತೂಕವನ್ನು ಇಳಿಸುವುದರ ಜೊತೆಗೆ ಬುದ್ಧಿಶಕ್ತಿಯನ್ನೂ ಹೆಚ್ಚಿಸುತ್ತದೆ.