alex Certify ಮೊಟ್ಟೆ ಮತ್ತು ಮಾಂಸಕ್ಕಿಂತಲೂ ಹೆಚ್ಚು ಪ್ರೋಟೀನ್‌ ಹೊಂದಿದೆ ಈ ಧಾನ್ಯ; ಅನೇಕ ಕಾಯಿಲೆಗಳಿಗೂ ಮದ್ದು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ಮತ್ತು ಮಾಂಸಕ್ಕಿಂತಲೂ ಹೆಚ್ಚು ಪ್ರೋಟೀನ್‌ ಹೊಂದಿದೆ ಈ ಧಾನ್ಯ; ಅನೇಕ ಕಾಯಿಲೆಗಳಿಗೂ ಮದ್ದು….!

ಆರೋಗ್ಯಕರ ಆಹಾರದ ಕಡೆಗೆ ಜನರ ಗಮನ ಕಡಿಮೆಯಾಗುತ್ತಿದೆ. ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಈಗ ಬಹುತೇಕ ಎಲ್ಲರ ಫೇವರಿಟ್‌. ಆದರೆ ಅವುಗಳಲ್ಲಿ ದೇಹಕ್ಕೆ ಅಗತ್ಯವಾದ ಪ್ರೋಟಿನ್‌ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದರಿಂದ ವಿಶೇಷವಾಗಿ ಸಸ್ಯಾಹಾರಿಗಳಿಗೆ ಅಗತ್ಯ ಪ್ರೋಟೀನ್‌ ಸಿಗುವುದೇ ಇಲ್ಲ. ಹಾಗಾಗಿ ಮೊಟ್ಟೆ ಮತ್ತು ಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟೀನ್ ಒದಗಿಸುವ ಧಾನ್ಯವನ್ನು ಸೇವಿಸಬೇಕು.

ಸೋಯಾಬೀನ್ ಬೇಳೆ ಪ್ರೋಟೀನ್‌ನ ಉಗ್ರಾಣವೆಂದೇ ಹೇಳಬಹುದು. ಇದು ಅನೇಕ ಇತರ ಪೋಷಕಾಂಶಗಳಲ್ಲಿ ಕೂಡ ಸಮೃದ್ಧವಾಗಿದೆ. ಫೈಬರ್, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಕೂಡ ಸೋಯಾಬೀನ್‌ನಲ್ಲಿ ಹೇರಳವಾಗಿ ಕಂಡುಬರುತ್ತದೆ.   ಮೊಟ್ಟೆ ಮತ್ತು ಮಾಂಸಕ್ಕಿಂತಲೂ ಹೆಚ್ಚಿನ ಪ್ರೋಟೀನ್‌ ಸೋಯಾಬೀನ್‌ನಲ್ಲಿದೆ.  ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಬ್ಬರೂ ಇದನ್ನು ಸೇವಿಸಬಹುದು.

ಸೋಯಾಬೀನ್‌ನಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ. ಸೋಯಾಬೀನ್‌ನಲ್ಲಿರುವ ಅಪರ್ಯಾಪ್ತ ಕೊಬ್ಬು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ.

ಸೋಯಾಬೀನ್ ದಾಲ್‌ನಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನು ತಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ. ಸೋಯಾಬೀನ್‌ನಲ್ಲಿರುವ ಪ್ರೋಟೀನ್ ಮತ್ತು ನಾರಿನಂಶವು ದೀರ್ಘಕಾಲದವರೆಗೆ ಹೊಟ್ಟೆ ತುಂಬುವಂತೆ ಮಾಡುತ್ತದೆ. ಇದರಿಂದ ನಾವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಸೋಯಾಬೀನ್ ಅನ್ನು ಸೇವನೆ ಮಾಡಲು ಹಲವು ವಿಧಾನಗಳಿವೆ. ದಾಲ್, ಕರಿ, ಪಲ್ಯ ಅಥವಾ ಸಲಾಡ್‌ನಲ್ಲಿ ಇದನ್ನು ಸೇರಿಸಿಕೊಳ್ಳಬಹುದು. ವಾರಕ್ಕೊಮ್ಮೆಯಾದರೂ ಸೋಯಾಬೀನ್‌ ಸೇವಿಸುವುದು ಉತ್ತಮ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...