ನಮ್ಮ ತಂದೆ ತಾಯಿಗಳು ನಮಗಾಗಿ ಮಾಡುವ ಅರ್ಧದಷ್ಟು ಭಾಗವನ್ನು ನಾವು ಮಾಡಲು ಸಾಧ್ಯವಾದರೆ, ನಾವು ನಮ್ಮನ್ನು ಅದೃಷ್ಟವಂತರು ಎಂದು ಪರಿಗಣಿಸಬೇಕು. ಪಾಲಕರು ತಮ್ಮ ಮಕ್ಕಳಿಗಾಗಿ ತಮ್ಮ ಶಕ್ತಿಯಿಂದ ಎಲ್ಲವನ್ನೂ ಮಾಡುತ್ತಾರೆ ಮತ್ತು ಅದು ಸತ್ಯ. ನೀವು ಅವರಿಗೆ ಏನನ್ನಾದರೂ ಉಡುಗೊರೆಯಾಗಿ ನೀಡಲು ಸಾಧ್ಯವಾದರೆ ಅದು ವಿಶ್ವದ ಅತ್ಯುತ್ತಮ ಭಾವನೆ ಅಲ್ಲವೇ? ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಯುವತಿಯೊಬ್ಬಳು ತನ್ನ ತಂದೆಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾಳೆ ಮತ್ತು ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ರಿದಾ ಥರಾನಾ ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಆಕೆಯ ತಂದೆ ಯಾವಾಗಲೂ ಒಂದು ನಿರ್ದಿಷ್ಟ ಕಾರನ್ನು ಹೊಂದಲು ಬಯಸುತ್ತಿದ್ದರು. ಜನವರಿ 4 ರಂದು ಅವರ ಜನ್ಮದಿನದಂದು ತನ್ನ ತಂದೆಯ ಕನಸಿನ ಕಾರನ್ನು ಮಗಳು ಗಿಫ್ಟ್ ಕೊಟ್ಟು ಕೂರ್ಗ್‌ನಲ್ಲಿರುವ ತನ್ನ ಹುಟ್ಟೂರಿಗೆ ಹೋಗಿದ್ದಾರೆ. ಕಾರನ್ನು ಕಂಡು ಅಪ್ಪ ಖುಷಿ ಪಡುವುದನ್ನು ಕಂಡ ನೆಟ್ಟಿಗರು ಈ ವಿಡಿಯೋಗೆ ಫಿದಾ ಆಗಿದ್ದಾರೆ.
“ಹುಟ್ಟುಹಬ್ಬದ ಶುಭಾಶಯಗಳು ಅಬ್ಬು… ನಾನು ನಿನ್ನನ್ನು ಚಂದ್ರನ ತನಕ ಮತ್ತು ಹಿಂತಿರುಗಿ ಪ್ರೀತಿಸುತ್ತೇನೆ. ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಇದು ಪ್ರಯಾಣವಾಗಿದೆ ಎಂದು ನನಗೆ ತಿಳಿದಿದೆ ಆದರೆ ನಾನು ಪ್ರೀತಿಸಿದ ಮೊದಲ ವ್ಯಕ್ತಿ ನೀನು ಮತ್ತು ಅದು ಶಾಶ್ವತವಾಗಿ ಉಳಿಯುತ್ತದೆ. ಧನ್ಯವಾದಗಳು ಎಂದು ಮಗಳು ಬರೆದುಕೊಂಡಿದ್ದಾಳೆ.