
ಹೀಗಾಗಿ ಸುಂದರವಾಗಿ ಅಕ್ಷರಗಳನ್ನು ಬರೆದರೆ ಅಂತವರನ್ನು ಎಲ್ಲರೂ ಪ್ರಶಂಸಿಸ್ತಾರೆ. ಇದೇ ರೀತಿ ಇಲ್ಲೊಬ್ಬ ಬಾಲಕಿ ವಿಶ್ವದ ‘ಬೆಸ್ಟ್ ಹ್ಯಾಂಡ್ ರೈಟಿಂಗ್’ ಹೊಂದಿರುವ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಇದಕ್ಕಾಗಿ ಆಕೆ ಪ್ರಶಸ್ತಿಯನ್ನೂ ಸಹ ಪಡೆದುಕೊಂಡಿದ್ದಾರೆ.
ಹೌದು, ನೇಪಾಳದ 16 ವರ್ಷದ ಪ್ರಕೃತಿ ಮಲ್ಲ ಎಂಬ ಈ ವಿದ್ಯಾರ್ಥಿನಿ ಇಂತಹದೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದು, ಮುತ್ತು ಪೋಣಿಸಿದಂತಿರುವ ಆಕೆಯ ಕೈಬರಹವನ್ನು ನೋಡಿ ಯುಎಇ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದನ್ನು ಆಕೆ ಯುಎಇ ಗೆ ತೆರಳಿ ಪಡೆದುಕೊಂಡಿದ್ದಾಳೆ. 14 ವರ್ಷದಲ್ಲಿದ್ದಾಗಲೇ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿ ತನ್ನ ಸುಂದರ ಕೈ ಬರಹದಿಂದ ಎಲ್ಲರ ಗಮನ ಸೆಳೆದಿದ್ದಳು.