ಇಂದು ಪ್ರೇಮಿಗಳ ದಿನದ ಜೊತೆಗೆ, ಬಸಂತ್ ಪಂಚಮಿಯನ್ನು ದೇಶಾದ್ಯಂತ ಆಚರಿಸಲಾಗ್ತಿದೆ. ಈ ದಿನ ಜ್ಞಾನದ ಅಧಿದೇವತೆಯಾದ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ಋತುಮಾನದ ಹಣ್ಣುಗಳನ್ನು ಹಳದಿ ಭಕ್ಷ್ಯದೊಂದಿಗೆ ನೈವೇದ್ಯ ಮಾಡಲಾಗುತ್ತದೆ. ಇವುಗಳ ಪೈಕಿ ದೇವರಿಗೆ ಅರ್ಪಿಸಲಾಗುವ ಬೋರೆ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಇದು ಕ್ಯಾಲೋರಿಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಫೈಬರ್, ವಿಟಮಿನ್ ಸಿ, ಪೊಟ್ಯಾಸಿಯಮ್‌ಗಳ ಉತ್ತಮ ಮೂಲ. ಈ ಹಣ್ಣುಗಳನ್ನು ತಾಜಾ ಸೇವಿಸಿದರೆ ದೇಹಕ್ಕೆ ಉತ್ತಮ ಪ್ರಮಾಣದ ಫೈಬರ್ ಮತ್ತು ಎಂಟಿಒಕ್ಸಿಡೆಂಟ್‌ಗಳು ಸಿಗುತ್ತವೆ.
ಮೂಳೆಗಳ ದೌರ್ಬಲ್ಯ ನಿವಾರಣೆ
ದೇಹದಲ್ಲಿ ತಾಮ್ರದ ಕೊರತೆಯು ಮೂಳೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೂಳೆಗಳಲ್ಲಿ ದೌರ್ಬಲ್ಯ ಕಾಡಲಾರಂಭಿಸುತ್ತದೆ. ಈ ರೀತಿಯ ತೊಂದರೆ ಇರುವವರು ಬೋರೆ ಹಣ್ಣುಗಳನ್ನು ತಿನ್ನಬೇಕು. ಇದರಲ್ಲಿರುವ ಉತ್ತಮ ಪ್ರಮಾಣದ ತಾಮ್ರ, ಕ್ಯಾಲ್ಸಿಯಂ ಮತ್ತು ರಂಜಕ ಮೂಳೆಗಳನ್ನು ಗಟ್ಟಿಮಾಡುತ್ತದೆ.
ಬೊಜ್ಜು ನಿಯಂತ್ರಣ
ಬೊಜ್ಜಿನ ಸಮಸ್ಯೆ ಇರುವವರು ಬೋರೆ ಹಣ್ಣನ್ನು ಸೇವನೆ ಮಾಡಬೇಕು. ಇದು ದೇಹದ ದ್ರವ್ಯರಾಶಿ, ಕೊಬ್ಬು ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಈ ಹಣ್ಣು ಸಹಾಯಕವಾಗಿದೆ.
ಕ್ಯಾನ್ಸರ್ ತಡೆಗಟ್ಟಲು ಸಹಕಾರಿ
ಬೋರೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು. ಈ ಹಣ್ಣುಗಳು ಅಮೈನೋ ಆಮ್ಲಗಳು, ಜೈವಿಕ ಸಕ್ರಿಯ ಅಂಶಗಳು, ಉತ್ಕರ್ಷಣ ನಿರೋಧಕ ಪರಿಣಾಮವನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.
ಹೃದಯದ ಆರೋಗ್ಯ
ಅಧ್ಯಯನದ ಪ್ರಕಾರ ಬೋರೆ ಹಣ್ಣುಗಳ ಸೇವನೆಯು ಹೃದಯಕ್ಕೆ ತುಂಬಾ ಆರೋಗ್ಯಕರವಾಗಿದೆ. ಇದರಲ್ಲಿ ಅನೇಕ ಫೈಟೊಕಾನ್‌ಸ್ಟಿಟ್ಯೂಯೆಂಟ್‌ಗಳು ಕಂಡುಬರುತ್ತವೆ. ಇವು ಹೃದ್ರೋಗವನ್ನು ನಿಯಂತ್ರಿಸಲು ಕೆಲಸ ಮಾಡುತ್ತವೆ.