ಕರುಳಿನ ಅನಿಯಮಿತವಾದ ಚಲನೆಯಿಂದ ಉಂಟಾಗುವ ಸಮಸ್ಯೆ ಎಂದರೆ ಮಲಬದ್ಧತೆ. ಸಾಮಾನ್ಯವಾಗಿ 30 ವರ್ಷ ವಯೋಮಿತಿಯ ನಂತರ ಬಹುತೇಕ ಜನರು ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಕೆಲವು ಹಣ್ಣುಗಳನ್ನು ಸೇವಿಸಿದರೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು.
ಕಿವಿ ಹಣ್ಣು
ಕಿವಿ ಹಣ್ಣನ್ನು ನಾಲ್ಕು ವಾರಗಳ ಕಾಲ ಗಣನೀಯವಾಗಿ ಸೇವಿಸುತ್ತಾ ಬಂದರೆ ಕರುಳಿನ ಚಲನೆಯು ಉತ್ತಮಗೊಳ್ಳುವುದು ಎಂದು ಅಧ್ಯಯನಗಳು ದೃಢಪಡಿಸಿವೆ.
ಸೇಬು
ಉತ್ತಮ ನಾರಿನಾಂಶ ಹೊಂದಿರುವ ಸೇಬು ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ಮಲಬದ್ದತೆಯನ್ನು ನಿವಾರಿಸಬಹುದು.
ಪಿಯರ್
ಇವುಗಳಲ್ಲಿ ನಾರಿನಾಂಶಗಳು ಸಮೃದ್ಧವಾಗಿದೆ. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಫ್ರಕ್ಟೋಸ್ ಮತ್ತು ಸೋರ್ಬಿಟೋಲ್ ಹೊಂದಿದ್ದು, ಇದು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
ಕಿತ್ತಳೆ
ಕಿತ್ತಳೆಯಲ್ಲಿ ಮಿಟಮಿನ್ ಸಿ ಮತ್ತು ನಾರಿನಾಂಶ ಸಮೃದ್ಧವಾಗಿದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ.
ಅಂಜೂರ
ಇದು ಕರಳಿನ ಚಲನೆಯನ್ನು ಉತ್ತೇಜಿಸುತ್ತದೆ. ಅವುಗಳಲ್ಲಿರುವ ಹೆಚ್ಚಿನ ನಾರಿನಾಂಶ ನೈಸರ್ಗಿಕ ವಿರೇಚಕವಾಗಿ ಕಾರ್ಯನಿರ್ವಹಿಸುತ್ತದೆ.