
ಈಗಾಗಲೇ ಋತು ಬದಲಾಗಿದೆ. ಬೇಸಿಗೆ ಕಾಲ ಮುಗಿದು ಮಳೆಗಾಲ ಶುರುವಾಗಿದೆ. ಋತು ಬದಲಾದಂತೆ ಅನೇಕ ರೋಗಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಮಳೆಗಾಲದಲ್ಲಿ ಜ್ವರ, ಕೆಮ್ಮ, ನೆಗಡಿಯಂತಹ ರೋಗ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಡೆಂಗ್ಯೂ, ಕಾಲರಾ, ಮಲೇರಿಯಾ ಮತ್ತು ಟೈಫಾಯಿಡ್ ನಂತಹ ಗಂಭೀರ ಕಾಯಿಲೆಗಳು ಸಹ ಕಾಡಬಹುದು. ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಹಾಗಾಗಿ ರೋಗಗಳು ಬೇಗ ದಾಳಿಯಿಡುತ್ತವೆ. ನಾವು ಸೇವಿಸುವ ಆಹಾರದ ಬಗ್ಗೆ ಗಮನ ನೀಡಿದ್ರೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಮಳೆಗಾಲದಲ್ಲಿ ಪ್ಲಮ್ ಹಣ್ಣು ಬಹಳ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಸಿ, ಖನಿಜಗಳು ಮತ್ತು ಫೈಬರ್ ಸಮೃದ್ಧವಾಗಿದೆ. ಇದರಲ್ಲಿ ಕಡಿಮೆ ಕ್ಯಾಲೊರಿಯಿದೆ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಮಳೆಗಾಲದಲ್ಲಿ ಲಿಚಿ ಸೇವನೆ ಕೂಡ ಒಳ್ಳೆಯದು. ಲಿಚಿ ಜೀರ್ಣಕ್ರಿಯೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕಾರಿ. ಲಿಚಿ ಆಂಟಿವೈರಲ್ ಗುಣಗಳನ್ನು ಹೊಂದಿದೆ. ಅದನ್ನು ತಿನ್ನುವುದ್ರಿಂದ ರಕ್ತ ಪರಿಚಲನೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ಪ್ರತಿದಿನ ಒಂದು ಸೇಬು ಸೇವನೆ ಮಾಡಿ, ರೋಗದಿಂದ ದೂರವಿರಿ ಎಂಬ ಮಾತಿದೆ. ಅನೇಕ ರೋಗದಿಂದ ದೂರವಿರಲು ಸೇಬು ಸೇವನೆ ಮಾಡಬೇಕು. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ. ಸಾಕಷ್ಟು ಆಂಟಿ-ಆಕ್ಸಿಡೆಂಟ್‌ಗಳು ಮತ್ತು ರೋಗ ನಿರೋಧಕ ಅಂಶಗಳು ಇದ್ರಲ್ಲಿವೆ.
ಮಳೆಗಾಲದಲ್ಲಿ ದಾಳಿಂಬೆ ತಿನ್ನಬೇಕು. ಇದು ಚಯಾಪಚಯವನ್ನು ಉತ್ತಮಗೊಳಿಸುವ ಜೊತೆಗೆ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.
ಮಳೆಗಾಲದಲ್ಲಿ ಬೀಟ್ರೂಟ್ ಸೇವನೆ ಮಾಡಬೇಕು. ಬೀಟ್ರೂಟ್ ನಲ್ಲಿ ರೋಗ ನಿರೋಧಕ ಶಕ್ತಿ ಮಾತ್ರವಿಲ್ಲ. ಅದು ತೂಕವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಉತ್ತಮವಾಗಿದೆ.
ಹಾಗಲಕಾಯಿ ಉರಿಯೂತದ ಗುಣಗಳನ್ನು ಹೊಂದಿದ್ದು, ಅದು ಮಲಬದ್ಧತೆ, ಹುಣ್ಣು ಮತ್ತು ಮಲೇರಿಯಾ ಮುಂತಾದ ಕಾಯಿಲೆಗಳನ್ನು ದೂರವಿರಿಸುತ್ತದೆ. ಮಧುಮೇಹ ರೋಗಿಗಳಿಗೆ ಇದನ್ನು ತಿನ್ನಲು ಸೂಚಿಸಲಾಗುತ್ತದೆ.
ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕೆಮ್ಮು, ಶೀತ, ಜ್ವರ ಇತ್ಯಾದಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದನ್ನು ಪಾನಕದ ರೂಪದಲ್ಲಿ ಮತ್ತು ಆಹಾರ ಅಥವಾ ಉಪ್ಪಿನಕಾಯಿ ರೂಪದಲ್ಲಿ ಸೇವನೆ ಮಾಡಬಹುದು. ಬೆಳಿಗ್ಗೆ ಇದನ್ನು ಖಾಲಿ ಹೊಟ್ಟೆಯಲ್ಲಿ ನೀರಿನ ಜೊತೆ ಕುಡಿಯುವುದು ಒಳ್ಳೆಯದು.