ಶ್ವಾಸಕೋಶ ದೇಹಕ್ಕೆ ಅಗತ್ಯವಾಗಿರುವ ಆಮ್ಲಜನಕವನ್ನು ಒದಗಿಸುತ್ತದೆ. ಹಾಗಾಗಿ ಶ್ವಾಸಕೋಶ ಆರೋಗ್ಯವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಹಾಗಾಗಿ ಶ್ವಾಸಕೋಶ ಆರೋಗ್ಯವನ್ನು ಹಾಳು ಮಾಡುವಂತಹ ಈ ಆಹಾರಗಳನ್ನು ಸೇವಿಸಬೇಡಿ.
*ಸಂಸ್ಕರಿಸಿದ ಮಾಂಸ : ಸಂಸ್ಕರಿಸಿದ ಮಾಂಸಕ್ಕೆ ನೈಟ್ರೈಟ್ ಗಳನ್ನು ಬಳಸಲಾಗುತ್ತದೆ ಇದು ಶ್ವಾಸಕೋಶದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ.
*ಆಲ್ಕೋಹಾಲ್ ಸೇವನೆ : ಆಲ್ಕೋಹಾಲ್ ಶ್ವಾಸಕೋಶದ ಮೇಲೆ ತುಂಬಾ ಪರಿಣಾವನ್ನು ಬೀರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ನ್ಯೂಮೊನಿಯ, ಇತರ ಶ್ವಾಸಕೋಶದ ಸಮಸ್ಯೆ ಕಾಡುತ್ತದೆ.
*ತುಂಬಾ ಉಪ್ಪು ಸೇವನೆ : ಉಪ್ಪನ್ನು ಅತಿಯಾಗಿ ಸೇವಿಸಬೇಡಿ. ಸೋಡಿಯಂ ಆಹಾರವು ಅಸ್ತಮಾ ರೋಗಲಕ್ಷಣಗಳನ್ನು ಹೆಚ್ಚಿಸುತ್ತದೆ. ಇದರಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ.
*ಪರಿಮಳಯುಕ್ತ ಪಾನೀಯ : ಪರಿಮಳಯುಕ್ತ ಸಿಹಿ ಪಾನೀಯಗಳನ್ನು ಸೇವಿಸುವುದರಿಂದ ಶ್ವಾಸಕೋಶದ ತೊಂದರೆ ಕಾಡುತ್ತದೆ. ಇದರಿಂದ ಮಕ್ಕಳಿಗೆ ಅಸ್ತಮಾ ಬರುತ್ತದೆ.