alex Certify ಆಯಾಸ ದೂರಗೊಳಿಸಿ ಶಕ್ತಿ ನೀಡುತ್ತೆ ಈ ʼಆಹಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯಾಸ ದೂರಗೊಳಿಸಿ ಶಕ್ತಿ ನೀಡುತ್ತೆ ಈ ʼಆಹಾರʼ

ಸಾಮಾನ್ಯವಾಗಿ ಬೇಸಿಗೆಯಲ್ಲಿ ನಮ್ಮ ದೇಹದಲ್ಲಿರುವ ಶಕ್ತಿ ಕಡಿಮೆಯಾಗುತ್ತದೆ. ಈ ಹವಾಮಾನದಲ್ಲಿ ಆಹಾರದ ಬಗ್ಗೆ ಗಮನ ಹರಿಸದಿದ್ದಲ್ಲಿ ಆಯಾಸ ಮತ್ತಷ್ಟು ಜಾಸ್ತಿಯಾಗುತ್ತದೆ. ಈ ಆಯಾಸ ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಗಂಟೆಗಟ್ಟಲೆ ನಮಗೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಆಹಾರದಲ್ಲಿ ಪೋಷಕಾಂಶದ ಕೊರತೆಯಿದ್ದಾಗ ಆಯಾಸವಾಗುತ್ತದೆ. ನಿಮ್ಮ ನಿದ್ದೆ ಕೂಡ ಆಯಾಸವನ್ನು ಹೆಚ್ಚು- ಕಡಿಮೆ ಮಾಡುತ್ತದೆ.

ಸ್ವಸ್ಥ ಆರೋಗ್ಯಕ್ಕಾಗಿ ನೀವು ಪ್ರತಿನಿತ್ಯದ  ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅದು ದೇಹದಲ್ಲಿರುವ ನೀರಿನ ಅಂಶವನ್ನು ಸಮತೋಲನದಲ್ಲಿಟ್ಟು, ಪೋಷಕಾಂಶ ನೀಡಿ ನಿಮ್ಮ ದೇಹವನ್ನು ಆಯಾಸ ಮುಕ್ತವಾಗಿಡುತ್ತದೆ.

ನಿಮ್ಮ ದೇಹದಲ್ಲಿ ಶಕ್ತಿಯನ್ನು ಸಮತೋಲನದಲ್ಲಿಡುವ ಕೆಲ ಆಹಾರಗಳು ಇಲ್ಲಿವೆ.

ಓಟ್ಮೀಲ್ : ಪ್ರೊಟೀನ್, ಮೆಗ್ನೀಷಿಯಂ, ರಂಜಕ ಮತ್ತು ವಿಟಮಿನ್ ಬಿ 1 ಇದರಲ್ಲಿರುತ್ತದೆ. ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಫೈಬರ್ ಮತ್ತು ಕಾರ್ಬೋ ಹೈಡ್ರೇಟ್ ಇದರಲ್ಲಿದ್ದು, ದೇಹದಲ್ಲಿ ಶಕ್ತಿ ಕಡಿಮೆಯಾಗಲು ಬಿಡುವುದಿಲ್ಲ.

ಬಾದಾಮಿ : ಇದು ದೇಹದ ಶಕ್ತಿ ಹೆಚ್ಚಿಸಲು ಸಹಕಾರಿ. ಮೆಗ್ನೀಸಿಯಮ್ ಮತ್ತು B ಜೀವಸತ್ವಗಳು ಇದರಲ್ಲಿ ಸಮೃದ್ಧವಾಗಿದೆ.

ಕುಂಬಳಕಾಯಿ ಬೀಜಗಳು : ಪ್ರೋಟೀನ್, ವಿಟಮಿನ್ ಮತ್ತು ಒಮೆಗಾ -3 ಕೊಬ್ಬಿನ ಆಮ್ಲಗಳು ಇದರಲ್ಲಿರುತ್ತವೆ. ಇವು ಆಯಾಸದ ವಿರುದ್ಧ ಹೋರಾಡಲು ಶಕ್ತಿ ನೀಡುತ್ತವೆ.

ಮೊಸರು : ಮೊಸರಿನಲ್ಲಿ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಹೆಚ್ಚಿದೆ. ಹಾಗೆಯೇ ಇದು ಹೊಟ್ಟೆಯನ್ನು ತಂಪಾಗಿಡುತ್ತದೆ. ಹಾಗಾಗಿ ಪ್ರತಿದಿನ ಒಂದು ಬಾರಿ ಮೊಸರು ಸೇವನೆ ಒಳ್ಳೆಯದು.

ಕಲ್ಲಂಗಡಿ : ನೀರು ಮತ್ತು ಎಲೆಕ್ಟ್ರೋಲೈಟ್ ಪ್ರಮಾಣ ಹೆಚ್ಚಿರುತ್ತದೆ. ಇದರ ಸೇವನೆಯಿಂದ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ.

ಬಾಳೆಹಣ್ಣು : ಈ ಹಣ್ಣನ್ನು ನೀವು ಯಾವಾಗ ಎಲ್ಲಿ ಬೇಕಾದ್ರೂ ಸೇವಿಸಬಹುದು. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಇದರಲ್ಲಿ ವಿಟಮಿನ್ ಬಿ, ಫೈಬರ್ ಮತ್ತು ಪೊಟಾಷಿಯಂ ಹೇರಳವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...