ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಜ್ವರ ಬರುವುದು ಸಾಮಾನ್ಯ. ವರ್ಷಕ್ಕೆ ಒಮ್ಮೆ ಸಾಮಾನ್ಯವಾಗಿ ಎಲ್ಲರಿಗೂ ಜ್ವರ ಬರುತ್ತದೆ. ಜ್ವರ ಬರುವುದು ಒಳ್ಳೆಯದು. ಆದ್ರೆ ತುಂಬಾ ದಿನ ಜ್ವರವಿದ್ದರೆ ಅದು ಅಪಾಯಕಾರಿ. ಜ್ವರ ಬಂದ ನಂತ್ರ ದೇಹ ಬೇರೆ ರೋಗದ ವಿರುದ್ಧ ಹೋರಾಡುವ ಶಕ್ತಿ ಪಡೆಯುತ್ತದೆ. ಆದ್ರೆ ಜ್ವರ ಬಂದ ಸಂದರ್ಭದಲ್ಲಿ ಸುಸ್ತು ಸಾಮಾನ್ಯವಾಗಿರುತ್ತದೆ. ಜ್ವರದ ಸುಸ್ತನ್ನು ಕೆಲ ಡಯಟ್ ಮೂಲಕ ಕಡಿಮೆ ಮಾಡಬಹುದು.
ಖಿಚ್ಡಿ ಲಘು ಆಹಾರ. ಜ್ವರದ ಸಂದರ್ಭದಲ್ಲಿ ಯಕೃತು ದುರ್ಬಲಗೊಂಡಿರುತ್ತದೆ. ಆಹಾರ ಜೀರ್ಣವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಖಿಚ್ಡಿ ಸೇವನೆ ಮಾಡುವುದ್ರಿಂದ ದೇಹಕ್ಕೆ ಶಕ್ತಿ ಸಿಗುವ ಜೊತೆಗೆ ಸುಸ್ತು ಶೀಘ್ರ ಕಡಿಮೆಯಾಗುತ್ತದೆ.
ಜ್ವರದಿಂದ ಸುಸ್ತು ಕಾಡುವ ಜೊತೆಗೆ ಮಲಬದ್ಧತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಆಹಾರ ಸರಿಯಾಗಿ ಸೇರುವುದಿಲ್ಲ. ಜ್ವರದಿಂದ ಬಳಲುವವರು ರವೆ ಉಪ್ಪಿಟ್ಟು ಅಥವಾ ರವಾ ಗಂಜಿ ಸೇವನೆ ಮಾಡಬೇಕು. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಬೇಯಿಸಿದ ಮೊಟ್ಟೆಯಲ್ಲಿ ಪ್ರೋಟೀಸ್ ಅಂಶ ಹೆಚ್ಚಿರುತ್ತದೆ. ಮೊಟ್ಟೆಯಲ್ಲಿ ವಿಟಮಿನ್ ಬಿ 6 ಮತ್ತು ಬಿ 12, ಸತು ಮತ್ತು ಸೆಲೆನಿಯಮ್ ಇದ್ದು, ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜ್ವರದಲ್ಲಿ ಸಾಕಷ್ಟು ಮೊಟ್ಟೆಗಳನ್ನು ಸೇವಿಸಿದರೆ ಸ್ವಲ್ಪ ಹಿತವೆನಿಸುತ್ತದೆ. ದೇಹದ ಸುಸ್ತು ಕಡಿಮೆಯಾಗುತ್ತದೆ.