ಆರೋಗ್ಯಕ್ಕೆ ಮಾರಕವಾಗಿರುವ ಧೂಮಪಾನದಿಂದ ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೆಚ್ಚಿನ ವಿಷಕಾರಿ ಗುಣ ಹೊಂದಿರುವ ತಂಬಾಕಿನಲ್ಲಿ ಇರುವ ನಿಕೋಟಿನ್ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ.
ಇದರಿಂದ ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ ಮುಂತಾದ ಭಾಗಗಳು ಹಾನಿಗೀಡಾಗುತ್ತವೆ. ಆರೋಗ್ಯಕ್ಕೆ ಹಾನಿ ಮಾಡುವ ಧೂಮಪಾನದಿಂದ ದೂರವಿರಲು ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟುವಂತ ಕೆಲವು ಆಹಾರಗಳು ಹೀಗಿವೆ.
ಕಿತ್ತಳೆ : ಧೂಮಪಾನ ಮಾಡುವವರು ವಿಟಮಿನ್ ‘ಸಿ’ ಅಂಶ ಹೇರಳವಾಗಿರುವ ಕಿತ್ತಳೆ ಹಣ್ಣಿನ ಸೇವನೆ ಮಾಡಬೇಕು. ನಿಕೋಟಿನ್ ವಿರುದ್ಧ ಹೋರಾಡಲು ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ‘ಸಿ’ ಯ ಅಗತ್ಯವಿರುತ್ತದೆ. ಹಾಗಾಗಿ ಧೂಮಪಾನಿಗಳು ವಿಟಮಿನ್ ‘ಸಿ’ ಯಿಂದ ಕೂಡಿರುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.
ಕ್ರ್ಯಾನ್ ಬೆರ್ರಿ : ಕ್ರ್ಯಾನ್ ಬೆರ್ರಿಯಲ್ಲಿರುವ ಆಮ್ಲೀಯ ಅಂಶಗಳು ಶರೀರದಲ್ಲಿರುವ ನಿಕೋಟಿನ್ ಅಂಶವನ್ನು ಹೊಡೆದು ಹಾಕುತ್ತದೆ.
ಬ್ರಕೋಲಿ : ಬ್ರಕೋಲಿಯಲ್ಲಿ ವಿಟಮಿನ್ ‘ಸಿ’ ಮತ್ತು ವಿಟಮಿನ್ ‘ಬಿ5’ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದ ಚಯಾಪಚಯ ಕ್ರಿಯೆಗಳು ಸರಾಗವಾಗುತ್ತದೆ ಮತ್ತು ಶ್ವಾಸಕೋಶಗಳ ಸೋಂಕುಗಳನ್ನು ತಡೆಗಟ್ಟಬಹುದಾಗಿದೆ.
ಪಾಲಕ್ ಸೊಪ್ಪು : ಪಾಲಕ್ ಸೊಪ್ಪಿನಲ್ಲಿ ಪಾಲಿಕ್ ಎಸಿಡ್ ಮತ್ತು ವಿಟಮಿನ್ ‘ಬಿ9’ ಹೇರಳವಾಗಿರುತ್ತದೆ. ಇದು ದೇಹದಲ್ಲಿರುವ ಹಾನಿಕಾರಕ ನಿಕೋಟಿನ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಶುಂಠಿ : ಶುಂಠಿಯ ಸೇವನೆಯಿಂದ ನಿಕೋಟಿನ್ ನಿಂದ ಉಂಟಾಗುವ ಹಾನಿಯನ್ನು ತಪ್ಪಿಸಬಹುದು ಮತ್ತು ಇದರ ಸೇವನೆಯಿಂದ ನಿಕೋಟಿನ್ ಸೇವಿಸುವ ಬಯಕೆ ಕೂಡ ಕಡಿಮೆಯಾಗುತ್ತದೆ.
ನಿಂಬು : ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಎಸಿಡ್ ಮತ್ತು ವಿಟಮಿನ್ ‘ಸಿ’ ಧೂಮಪಾನದಿಂದಾಗುವ ಹಾನಿಯನ್ನು ತಡೆಗಟ್ಟುತ್ತದೆ. ಇದರಿಂದ ಶರೀರ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು.
ಕ್ಯಾರೆಟ್ : ಪ್ರತಿ ದಿನ ಕ್ಯಾರೆಟ್ ಸೇವಿಸುವುದರಿಂದ ದೇಹಕ್ಕೆ ವಿಟಮಿನ್ ‘ಸಿ’ ಮತ್ತು ‘ಎ’ ಅಂಶಗಳು ಹೇರಳವಾಗಿ ಸಿಗುತ್ತವೆ.
ದಾಳಿಂಬೆ : ದಾಳಿಂಬೆ ಹಣ್ಣಿನ ಸೇವನೆಯಿಂದ ರಕ್ತಸಂಚಲನ ಸರಾಗವಾಗಿ ನಡೆಯುತ್ತದೆ ಮತ್ತು ಇದರಿಂದ ಕೆಂಪು ರಕ್ತ ಕಣಗಳು ಹೆಚ್ಚುತ್ತವೆ.