alex Certify ʼಶ್ವಾಸಕೋಶʼದ ಆರೋಗ್ಯವನ್ನು ಕಾಪಾಡುತ್ತೆ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಶ್ವಾಸಕೋಶʼದ ಆರೋಗ್ಯವನ್ನು ಕಾಪಾಡುತ್ತೆ ಈ ಆಹಾರ

ಶ್ವಾಸಕೋಶ ಆರೋಗ್ಯವಾಗಿದ್ದಷ್ಟು ಸರಾಗ ಉಸಿರಾಟ ಕ್ರಿಯೆ ನಡೆಯುತ್ತದೆ. ನಿಮ್ಮ ಉಸಿರಾಟ ಕ್ರಿಯೆ ಅಡೆ ತಡೆಗಳಿಲ್ಲದೇ ನಡೆದರೆ ಮಾನಸಿಕ ನೆಮ್ಮದಿ ಮತ್ತು ಸಮತೋಲನವಿರುತ್ತದೆ. ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈ ಆಕ್ಸೈಡ್ ಹೊರ ಹಾಕುತ್ತಾ ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ಈ ನಿಟ್ಟಿನಲ್ಲಿ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸುವ ಕೆಲವು ಆಹಾರಗಳು ಇಲ್ಲಿವೆ ನೋಡಿ.

ನೀರು : ನೀರು ಶ್ವಾಸಕೋಶವನ್ನು ಹೈಡ್ರೇಟ್​ ಆಗಿ ಇಡುತ್ತದೆ. ಸರಾಗ ರಕ್ತ ಸಂಚಾರಕ್ಕೆ ನೆರವಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ : ಶ್ವಾಸಕೋಶದ ಉರಿಯೂತ, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಅಲ್ಲದೇ ಸೋಂಕಿನ ವಿರುದ್ಧವೂ ಹೋರಾಡುತ್ತದೆ. ಬೆಳ್ಳುಳ್ಳಿ ಸೇವಿಸದಿರುವ ಧೂಮಪಾನಿಗಳಿಗಿಂತ ಬೆಳ್ಳುಳ್ಳಿ ಸೇವಿಸುವ ಧೂಮಪಾನಿಗಳಿಗೆ ಕ್ಯಾನ್ಸರ್​ ನ ಅಪಾಯ ಶೇ 40 ರಷ್ಟು ಕಡಿಮೆ ಇದೆ.

 ಶುಂಠಿ : ಟಾಕ್ಸಿನ್ ಹೊರಹಾಕಲು ಶುಂಠಿ ನೆರವಿಗೆ ಬರುತ್ತದೆ. ಶುಂಠಿಯು ಸರಾಗ ವಾಯು ಸಂಚಾರಕ್ಕೆ ನೆರವಾಗುತ್ತದೆ.

ಎಲೆಕೋಸು ಮತ್ತು ಬ್ರೊಕೋಲಿ : ಎಲೆಕೋಸು, ಹೂ ಕೋಸು ಮತ್ತು ಗೆಡ್ಡೆ ಕೋಸು ಶ್ವಾಸಕೋಶದ ಕ್ಯಾನ್ಸರನ್ನು ನಿಯಂತ್ರಿಸುತ್ತದೆ. ಇವುಗಳಲ್ಲಿ ಸಮೃದ್ಧವಾಗಿರುವ ಕ್ಲೋರೊಫಿಲ್​ಗಳು ರಕ್ತವನ್ನು ಶುದ್ಧಿಕರೀಸುತ್ತವೆ.

ದಾಳಿಂಬೆ : ದಾಳಿಂಬೆ ಸೇವನೆಯೂ ಶ್ವಾಸಕೋಶದಲ್ಲಿ ಗೆಡ್ಡೆಗಳನ್ನು ನಿಯಂತ್ರಿಸುತ್ತದೆ. ದಾಳಿಂಬೆಯೂ ಎಲಾಜಿಕ್ ಸೇರಿದಂತೆ ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

ಅರಿಶಿನ : ಅರಿಶಿನದಲ್ಲಿರುವ ಕರ್ಕ್ಯೂಮಿನ್ ಅಂಶವು ಫ್ರೀ ರ್ಯಾಡಿಕಲ್ ಸೆಲ್ಸ್​ಗಳ ಬೆಳವಣಿಗೆಯನ್ನು ತಡೆಯುತ್ತದೆ. ಅಸ್ತಮಾ, ಊರಿಯೂತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ನಿವಾರಿಸುತ್ತವೆ.

ಇದಿಷ್ಟೇ ಅಲ್ಲದೇ ಸೇಬು, ದ್ರಾಕ್ಷಿ, ಬೀನ್ಸ್ ಮತ್ತು ನಟ್ಸ್​​ಗಳು ಶ್ವಾಸಕೋಶದ ಆರೋಗ್ಯಕ್ಕೆ ಪೂರಕವಾಗಿದೆ. ಕ್ಯಾರೆಟ್ ಮತ್ತು ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶವು ಸೋಂಕು ಮತ್ತು ಉರಿಯೂತದಿಂದ ರಕ್ಷಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...