alex Certify ಆರೋಗ್ಯಕ್ಕೆ ಸೂಪರ್ ಈ ಫುಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಸೂಪರ್ ಈ ಫುಡ್

ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ವ್ಯಾಯಾಮ, ಯೋಗ ಸೇರಿದಂತೆ ಅನೇಕ ಕಸರತ್ತುಗಳನ್ನು ಮಾಡ್ತಾರೆ. ವ್ಯಾಯಾಮ ಮಾಡಿದ್ರೆ ಸಾಲದು ಅದ್ರ ಜೊತೆ ಉತ್ತಮ ಡಯಟ್ ಪಾಲನೆ ಮಾಡಬೇಕು. ಉತ್ತಮ ಆರೋಗ್ಯಕ್ಕೆ ನೆರವಾಗುವ ಆಹಾರಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿದೆ.

ರೋಗಗಳಿಂದ ಪಾರಾಗಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ.  ಕಿತ್ತಳೆ ಹಣ್ಣಿನಲ್ಲಿ ಹೆಚ್ಚಿನ ರೋಗ ನಿರೋಧಕ ಗುಣ ಇದ್ದು ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ. ರೋಗನಿರೋಧಕ ಶಕ್ತಿ  ಚೆನ್ನಾಗಿದ್ದರೆ ರೋಗಗಳಿಂದ ದೂರವಿರುತ್ತೀರಿ. ಅನಾರೋಗ್ಯಕ್ಕೆ ಒಳಗಾದರೂ ಸಹ ಬೇಗ ಚೇತರಿಸಿಕೊಳ್ಳಬಹುದು.

ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವ  ಹಣ್ಣುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿತ್ತಳೆ, ನಿಂಬೆ ಇತ್ಯಾದಿಗಳು ಅಲರ್ಜಿಯಿಂದ ನಮ್ಮ ದೇಹವನ್ನು ರಕ್ಷಿಸುತ್ತವೆ. ಚರ್ಮಕ್ಕೆ ವಿಟಮಿನ್ ಸಿ ಯ ಅತ್ಯುತ್ತಮ ಮೂಲಗಳಾಗಿವೆ.

ಕೋಸುಗಡ್ಡೆ ಒಂದು ರೀತಿಯ ಸೂಪರ್ಫುಡ್ ಆಗಿದ್ದು ಅನೇಕ ರೋಗಗಳಿಗೆ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಕ್ಯಾನ್ಸರ್ ರೋಗಿಗಳಿಗೆ ಕೋಸುಗಡ್ಡೆ ಬೆಸ್ಟ್. ಇದರಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಐಸೊಥಿಯೊಸೈನೇಟ್  ಪೋಷಕಾಂಶಗಳಿವೆ. ಈ ಕಾರಣಕ್ಕಾಗಿ ಕೋಸುಗಡ್ಡೆ ಕ್ಯಾನ್ಸರ್ ರೋಗಕ್ಕೆ ಉತ್ತಮ.

ಕೆಲವು ವರ್ಷಗಳಿಂದ ಜನರು ಗ್ರೀನ್ ಟೀಗೆ ಹೆಚ್ಚು ಆಕರ್ಷಿತರಾಗಿದ್ದಾರೆ. ಬೊಜ್ಜು ನಿಯಂತ್ರಿಸಲು ಅಥವಾ ದೇಹದ ಕೊಬ್ಬನ್ನು ಕಡಿಮೆ ಮಾಡಲು  ಗ್ರೀನ್ ಟೀ ಸಹಾಯ ಮಾಡುತ್ತದೆ. ಇದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.  ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...