alex Certify ಸದಾ ಫಿಟ್ ಆಂಡ್ ಯಂಗ್ ಆಗಿರಲು ಮುಖ್ಯ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಫಿಟ್ ಆಂಡ್ ಯಂಗ್ ಆಗಿರಲು ಮುಖ್ಯ ಈ ಆಹಾರ

ಯೌವನದ ಹೊಳಪು ವಯಸ್ಸಾದ ನಂತರವೂ ಇರಬೇಕೆಂಬುದು ಎಲ್ಲರ ಆಸೆ. ಸದಾ ಫಿಟ್ ಆ್ಯಂಡ್ ಯಂಗ್ ಆಗಿರಬೇಕೆಂದ್ರೆ ನಮ್ಮ ಆಹಾರದ ಮೇಲೆ ನಿಯಂತ್ರಣವಿರಬೇಕು. ಪೌಷ್ಟಿಕಾಂಶಗಳು ಹೆಚ್ಚಿರುವ ಆಹಾರದ ಸೇವನೆಯಿಂದ ಹೆಚ್ಚು ಆರೋಗ್ಯವಂತರಾಗಿರಲು ಸಾಧ್ಯ. ಅಂತಹ ಆಹಾರದಲ್ಲಿ ಅಣಬೆ(ಮಶ್ರೂಮ್) ಸಹ ಒಂದು.

ಅಣಬೆ ಆರೋಗ್ಯಕ್ಕೆ ಒಳ್ಳೆಯದು. ಇದ್ರ ರುಚಿ ಅನೇಕರಿಗೆ ಇಷ್ಟ.  ಅಣಬೆ  ಅಮೈನೊ ಆಮ್ಲಗಳು, ಖನಿಜಗಳು, ಲವಣಾಂಶಗಳನ್ನು ಒಳಗೊಂಡಿದೆ. ರೋಗ ನಿರೋಧಕ  ಶಕ್ತಿ ಇದರಲ್ಲಿದೆ. ಮಶ್ರೂಮ್ ನಲ್ಲಿ ಅನೇಕ ಬಗೆಯ ಅಡುಗೆ ಮಾಡಬಹುದು. ಅಣಬೆಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿನ ಆಂಟಿವೈರಲ್ ಮತ್ತು ಇತರ ಪ್ರೋಟೀನ್‌ಗಳ ಪ್ರಮಾಣ ಹೆಚ್ಚಾಗುತ್ತದೆ. ಇದು ದೇಹದ ಜೀವಕೋಶಗಳನ್ನು ಸರಿಪಡಿಸುತ್ತದೆ. ಮಶ್ರೂಮ್ ಹೃದ್ರೋಗ, ಮಧುಮೇಹ, ಕ್ಯಾನ್ಸರ್ ಮತ್ತು ಬೊಜ್ಜಿನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ.

ವಯಸ್ಸಾಗುವುದನ್ನು ತಡೆಯಲು ಅಣಬೆ ಬಹಳ ಮುಖ್ಯ. ಅಣಬೆಗಳಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿವೆ. ಇದು ಚರ್ಮದ ಹೊಳಪನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದನ್ನು ಬೇಯಿಸಿ ತಿನ್ನುವುದು ಒಳ್ಳೆಯದು. ಅಣಬೆ ಸೇವನೆಯಿಂದ ಸ್ತನ ಕ್ಯಾನ್ಸರ್ ದೂರವಾಗುತ್ತದೆ. ಮಶ್ರೂಮ್ ನಲ್ಲಿ ವಿಟಮಿನ್ ಡಿ ಅಂಶ ಇದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಇದರಿಂದ ಸಂಧಿವಾತ ಬರುವ ಸಾಧ್ಯತೆಯೂ ಕಡಿಮೆ. ಅಣಬೆಗಳಲ್ಲಿ  ಬಹಳ ಕಡಿಮೆ ಕಾರ್ಬೋಹೈಡ್ರೇಟ್  ಇರುವುದರಿಂದ  ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಸರಿಯಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...