ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಉದರಕ್ಕೆ ಸಿಹಿ, ಮಧುಮೇಹಿಗಳು ನಿತ್ಯ ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬಹುತೇಕ ನಿಯಂತ್ರಣಕ್ಕೆ ಬರುತ್ತದೆ.
ಇದು ಕೊಬ್ಬು ಕರಗಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನೂ ನಿಯಂತ್ರಿಸುತ್ತದೆ. ನಿತ್ಯ ಆಹಾರ ಕ್ರಮದಲ್ಲಿ ಹಾಗಲಕಾಯಿ ಸೇವಿಸಿ. ಮಧುಮೇಹವನ್ನು ನಿಯಂತ್ರಿಸಿ.
ಪಾಲಕ್ ಸೊಪ್ಪಿನಲ್ಲಿ ಹಲವು ಪೋಷಕಾಂಶಗಳು ಮಾತ್ರವಲ್ಲ, ಇದರಲ್ಲಿ ಅತ್ಯುತ್ತಮ ಪ್ರಮಾಣದ ನಾರಿನಾಂಶವಿದ್ದು ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
ಹಸಿ ಎಳ್ಳು ಸೇವನೆಯಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಬೆಲ್ಲ ಬೆರೆಸದೆ ಜ್ಯೂಸ್ ತಯಾರಿಸಿ ಕುಡಿಯುವ ಮೂಲಕ ಮತ್ತು ಆಹಾರದೊಂದಿಗೆ ಎಳ್ಳನ್ನು ಬಳಸುವ ಮೂಲಕ ಟೈಪ್ 2 ಮಧುಮೇಹವನ್ನು ಕಡಿಮೆ ಮಾಡಬಹುದು. ಎಳ್ಳಿನಲ್ಲಿರುವ ಪೋಷಕಾಂಶಗಳು ದೇಹದ ಇತರ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸುತ್ತದೆ.