alex Certify ಪುರುಷರಲ್ಲಿ ಲೈಂಗಿಕ ದುರ್ಬಲತೆಗೆ ಕಾರಣವಾಗಬಹುದು ಈ ಆಹಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರಲ್ಲಿ ಲೈಂಗಿಕ ದುರ್ಬಲತೆಗೆ ಕಾರಣವಾಗಬಹುದು ಈ ಆಹಾರ…!

ದಂಪತಿಗಳು ಖುಷಿಯಾಗಿ ಬದುಕಬೇಕೆಂದರೆ ಅವರ ನಡುವಿನ ಲೈಂಗಿಕ ಸಂಬಂಧ ಕೂಡ ಚೆನ್ನಾಗಿರಬೇಕು. ನಿಯಮಿತ ಲೈಂಗಿಕ ಕ್ರಿಯೆಯಿಂದ ಪರಸ್ಪರರನ್ನು ಅರ್ಥಮಾಡಿಕೊಂಡು ಸೌಹಾರ್ದಯುತವಾಗಿ ಇರಲು ಸಾಧ್ಯ. ಈ ಸಂಬಂಧ ಇಬ್ಬರ ಲೈಂಗಿಕ ಬಯಕೆಗಳನ್ನು ಪೂರೈಸುತ್ತದೆ ಮತ್ತು ಜೀವನವನ್ನು ನಡೆಸಲು ಹೊಸ ಶಕ್ತಿಯನ್ನು ನೀಡುತ್ತದೆ. ಅನೇಕ ಪುರುಷರು ಮಲಗುವ ಕೋಣೆಯಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ಬಲಪಡಿಸಲು ಹೊಸ ಪ್ರಯೋಗಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ.

ಇವುಗಳಲ್ಲಿ ಅನೇಕ ರೀತಿಯ ಗಿಡಮೂಲಿಕೆಗಳು ಮತ್ತು ಇತರ ವಸ್ತುಗಳ ಸೇವನೆಯೂ ಸೇರಿದೆ. ಆದರೆ ಕೆಲವೊಂದು ನಿರ್ದಿಷ್ಟ ಪದಾರ್ಥಗಳ ಸೇವನೆಯಿಂದ ಪುರುಷತ್ವಕ್ಕೇ ಧಕ್ಕೆ ಬರುತ್ತದೆ. ಆ ಪದಾರ್ಥಗಳನ್ನು ಪುರುಷರು ಸೇವನೆ ಮಾಡಬಾರದು. ಹಿಂದಿನ ಕಾಲದಲ್ಲಿ ಋಷಿಮುನಿಗಳು ಮತ್ತು ಸಂತರು ಸಹ ಕಾಮದಿಂದ ದೂರವಿರಲು ಈ 3 ವಸ್ತುಗಳನ್ನು ಸೇವಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅವು ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ.  

ಪುರುಷರಲ್ಲಿ ಲೈಂಗಿಕ ದುರ್ಬಲತೆಗೆ ಕಾರಣ

ನೆಲ್ಲಿಕಾಯಿ – ನೆಲ್ಲಿಕಾಯಿ ವಿಟಮಿನ್-ಸಿ ಯ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ. ನೆಲ್ಲಿಕಾಯಿ ಸೇವನೆ ಮಹಿಳೆಯರಿಗೆ ವರದಾನವಿದ್ದಂತೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಆದರೆ ಪುರುಷರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು. ಇದನ್ನು ಹೆಚ್ಚು ಸೇವಿಸುವುದರಿಂದ ಅವರ ಪುರುಷತ್ವಕ್ಕೆ ಶಾಶ್ವತವಾಗಿ ಕುಂದುಂಟಾಗಬಹುದು. ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ, ಇದು ದುರ್ಬಲತೆಗೆ ಕಾರಣವಾಗುತ್ತದೆ.

ಪ್ಪಿನಕಾಯಿ – ಊಟದ ಜೊತೆಗೆ ಉಪ್ಪಿನಕಾಯಿ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಮಾವಿನ ಮಿಡಿ ಉಪ್ಪಿನಕಾಯಿ ಎಲ್ಲರ ಫೇವರಿಟ್‌. ಆದರೆ ಮಾವಿನಕಾಯಿ ಉಪ್ಪಿನಕಾಯಿ ಪುರುಷರಲ್ಲಿ ಲೈಂಗಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಉಪ್ಪಿನಕಾಯಿ ಪುರುಷ ಹಾರ್ಮೋನ್‌ಗಳಲ್ಲಿ ಕುಸಿತವನ್ನು ಉಂಟುಮಾಡುತ್ತದೆ, ಇದರಿಂದಾಗಿ ವ್ಯಕ್ತಿ ಖಾಸಗಿ ಕ್ಷಣಗಳಲ್ಲಿ ತನ್ನ ಸಂಗಾತಿಯ ಮುಂದೆ ವಿಫಲನಾಗುತ್ತಾನೆ. ಇದು ಇಬ್ಬರ ನಡುವಿನ ವೈಯಕ್ತಿಕ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತದೆ.

ಬಾಳೆ ಗಿಡದ ಬೇರು – ಬಾಳೆಕಾಯಿ, ಬಾಳೆ ಎಲೆ, ಬಾಳೆ ಗಿಡದ ಕಾಂಡವನ್ನು ದೇಶದ ಅನೇಕ ಭಾಗಗಳಲ್ಲಿ ಸೇವನೆ ಮಾಡಲಾಗುತ್ತದೆ. ಆದರೆ ಪುರುಷರು ಬಾಳೆ ಗಿಡದ ಬೇರನ್ನು ಅಪ್ಪಿತಪ್ಪಿಯೂ ಸೇವಿಸಬಾರದು. ಪುರುಷರಿಗೆ 3 ದಿನಗಳ ಕಾಲ ಬಾಳೆಮರದ ಬೇರಿನ ರಸವನ್ನು ನೀಡಿದರೆ ಲೈಂಗಿಕವಾಗಿ ಸಂಪೂರ್ಣ ದುರ್ಬಲರಾಗಿಬಿಡುತ್ತಾರೆ. ಇದಕ್ಕೆ ಕಾರಣವೆಂದರೆ ಬಾಳೆ ಬೇರಿನ ರಸವು ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಟ್ಟವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...