ಯೋನಿ ಇನ್ಫೆಕ್ಷನ್ ಹಾಗೂ ಬಿಳಿ ಮುಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತವೆ. ಅಸುರಕ್ಷಿತ ಸಂಭೋಗ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ ಮಾತ್ರ ಈ ಸಮಸ್ಯೆಗಳು ಕಾಡುವುದಿಲ್ಲ. ಕೆಲವೊಮ್ಮೆ ತಪ್ಪು ಆಹಾರ ಪದ್ಧತಿ ಕೂಡ ಯೋನಿ ಸೋಂಕಿಗೆ ಕಾರಣವಾಗುತ್ತದೆ.
ಕೆಲವೊಂದು ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡು ನಾವು ಸೇವನೆ ಮಾಡ್ತಿರುತ್ತೇವೆ. ಆದ್ರೆ ಮಹಿಳೆಯರ ಯೋನಿ ಸಮಸ್ಯೆಗೆ ಈ ಆಹಾರಗಳೇ ಕಾರಣವಾಗಿರುತ್ತವೆ. ಹಾಗಾಗಿ ಮಹಿಳೆಯರು ಯೋನಿ ಸೋಂಕಿಗೆ ಕಾರಣವಾಗುವ ಆಹಾರದ ಬಗ್ಗೆ ತಿಳಿದಿರುವುದು ಒಳ್ಳೆಯದು.
ಎಲೆಕೋಸು : ಯಸ್, ಎಲೆಕೋಸು ನಿಮ್ಮ ಯೋನಿಗೆ ಒಳ್ಳೆಯದಲ್ಲ. ಎಲೆ ಕೋಸನ್ನು ಅತಿಯಾಗಿ ಸೇವನೆ ಮಾಡುವುದ್ರಿಂದ ಯೋನಿಯಲ್ಲಿ ಬದಲಾವಣೆಯಾಗುತ್ತದೆ. ಸೋಂಕು ಸೇರಿದಂತೆ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ. ಸಂಭೋಗಕ್ಕೂ ಮೊದಲು ಎಲೆಕೋಸನ್ನು ಸೇವನೆ ಮಾಡಬೇಡಿ.
ಹುರಿದ ತಿಂಡಿ : ಚಿಪ್ಸ್, ಹುರಿದ ಅನ್ನ, ಹುರಿದ ಆಹಾರಗಳು ಬಾಯಿಗೆ ರುಚಿ. ಹಾಗಾಗಿ ಡಯಟ್ ಬಿಟ್ಟು ಅನೇಕರು ಇದನ್ನು ಸೇವನೆ ಮಾಡ್ತಾರೆ. ಆದ್ರೆ ಮಹಿಳೆಯರ ಯೋನಿ ಸಮಸ್ಯೆಗೆ ಇದು ಕಾರಣವಾಗುತ್ತದೆ. ಇದು ಯುನಿನೋಸಿಸ್ ಸಮಸ್ಯೆಗೆ ಕಾರಣವಾಗುತ್ತದೆ. ಮಿತಿಯಲ್ಲಿದ್ರೆ ಯಾವುದೂ ಅಪಾಯವಲ್ಲ. ಮಿತಿ ಮೀರಿದ್ರೆ ಸಂಕಷ್ಟ ತಪ್ಪಿದ್ದಲ್ಲ.
ಆಲ್ಕೋಹಾಲ್ : ಆಲ್ಕೋಹಾಲ್ ಸೇವನೆಯಿಂದ ನಿರ್ಜಲೀಕರಣದ ಸಮಸ್ಯೆಯುಂಟಾಗುತ್ತದೆ. ಪ್ರತಿದಿನ ಆಲ್ಕೋಹಾಲ್ ಸೇವನೆ ಒಳ್ಳೆಯದಲ್ಲ. ಇದ್ರಿಂದ ಯೋನಿ ಕೂಡ ಶುಷ್ಕವಾಗುತ್ತದೆ. ಯೋನಿಯ ನಯಗೊಳಿಸುವಿಕೆಗೆ ಇದ್ರಿಂದ ತೊಂದರೆಯಾಗುತ್ತದೆ.
ಸಿಹಿ ಆಹಾರ : ಸಿಹಿ ಆಹಾರ ಎಲ್ಲರಿಗೂ ಇಷ್ಟ. ಆದ್ರೆ ವಯಸ್ಸು ಹೆಚ್ಚಾಗ್ತಿದ್ದಂತೆ ಸಿಹಿ ತಿಂಡಿ ಸೇವನೆ ಕಡಿಮೆ ಮಾಡಬೇಕು. ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗ್ತಿದ್ದಂತೆ ಯೋನಿ ಸೋಂಕು ಕಾಡಲು ಶುರುವಾಗುತ್ತದೆ.
ಈರುಳ್ಳಿ : ಈರುಳ್ಳಿ ಸೇವನೆಯಿಂದ ಬಾಯಿಯಲ್ಲಿ ವಾಸನೆ ಬರುವಂತೆ ಯೋನಿಯಲ್ಲಿ ಸಮಸ್ಯೆ ಕಾಡುತ್ತದೆ. ಯೋನಿಯಲ್ಲಿರುವ ಬ್ಯಾಕ್ಟೀರಿಯಾಗಳಲ್ಲಿ ಬದಲಾವಣೆಯಾಗುತ್ತದೆ.