ಗರ್ಭಿಣಿಯರು ತಮ್ಮ ಆರೋಗ್ಯ, ಆಹಾರದ ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಪ್ರತಿ ದಿನ ಅವ್ರ ದೇಹದಲ್ಲಿ ಒಂದೊಂದು ಬದಲಾವಣೆಯಾಗ್ತಿರುತ್ತದೆ. ಆರಂಭದಲ್ಲಿ ಮೂರು ತಿಂಗಳು ಹೆಚ್ಚು ಜಾಗೃತಿ ವಹಿಸಬೇಕು. ಅದ್ರ ಜೊತೆ ಕೊನೆಯ ಮೂರು ತಿಂಗಳು ಕೂಡ ಎಚ್ಚರಿಕೆಯಿಂದಿರಬೇಕಾಗುತ್ತದೆ. 8ನೇ ತಿಂಗಳಲ್ಲಿ ಗರ್ಭಿಣಿ ಕೆಲ ಆಹಾರದಿಂದ ದೂರವಿರುವುದು ಒಳ್ಳೆಯದು.
ಕೆಫೀನ್ ಯುಕ್ತ ಪಾನೀಯಗಳ ಸೇವನೆಯಿಂದ ದೂರವಿರಬೇಕು. ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಇರುತ್ತದೆ. ಇದು ಭ್ರೂಣದ ಅಭಿವೃದ್ಧಿಗೆ ಅಡ್ಡಯುಂಟು ಮಾಡುತ್ತದೆ. ಹಾಗಾಗಿ ಆರಂಭದ ಮೂರು ತಿಂಗಳು ಪಪ್ಪಾಯಿ ಸೇವಿಸದಂತೆ ವೈದ್ಯರು ಸಲಹೆ ನೀಡ್ತಾರೆ. 8ನೇ ತಿಂಗಳಿನಲ್ಲಿ ಕೂಡ ಪಪ್ಪಾಯಿ ಸೇವನೆಯಿಂದ ದೂರವಿರುವುದು ಉತ್ತಮ.
ಪಾಶ್ಚರೀಕರಿಸದ ಮೇಕೆ, ಹಸು ಮತ್ತು ಕುರಿ ಹಾಲು ಕುಡಿಯುವುದನ್ನು ತಪ್ಪಿಸಿ. ಗರ್ಭಾವಸ್ಥೆಯಲ್ಲಿ ಮೇಕೆ ಹಾಲು ತುಂಬಾ ಅಪಾಯಕಾರಿ. ಸೋಯಾ ಸಾಸ್‌ನಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಇದ್ದು, ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಗರ್ಭಿಣಿಗೆ ಇದು ಅತ್ಯಂತ ಅಪಾಯಕಾರಿ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಆಲ್ಕೊಹಾಲ್ ನಿಂದ ದೂರವಿರಬೇಕು. ಮದ್ಯಪಾನ ಮಾಡುವುದರಿಂದ ಮಗುವಿಗೆ ಹಾನಿಯಾಗುತ್ತದೆ.
ಅನಾನಸ್, ಹಸಿ ಮೊಟ್ಟೆ, ಹಸಿ ಮಾಂಸ, ಕೃತಕ ಸಿಹಿಕಾರಕ, ಸಮುದ್ರಾಹಾರ, ರೆಡಿಮೇಡ್ ಆಹಾರ, ಹೆಪ್ಪುಗಟ್ಟಿದ ಆಹಾರ, ಹೆಚ್ಚು ಉಪ್ಪು, ಗಿಡಮೂಲಿಕೆ ಚಹಾ ಇತ್ಯಾದಿಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಯಾವುದೇ ಆಹಾರವನ್ನು ತೆಗೆದುಕೊಳ್ಳುವಾಗ ವೈದ್ಯರ ಸಲಹೆ ಪಡೆಯಿರಿ.